ಬಾಗಲಕೋಟ:- ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಬಾಗಲಕೋಟೆಯಲ್ಲಿ ಹಿಂದು ಜಾಗರಣವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ ಮಾಡಲಾಗಿದೆ.
ಪಾಕ್ ಹಾಗೂ ಉಗ್ರರ ವಿರುದ್ಧ ಘೋಷಣೆ ಕೂಗಿ, ಪಾಕ್ ಧ್ವಜದ ಮೇಲೆ ಚಪ್ಪಲಿ ಇಟ್ಟು ತುಳಿದು ಆಕ್ರೋಶ ಹೊರ ಹಾಕಿದ್ದಾರೆ. ಕಿಲ್ಲಾ ಓಣಿಯಿಂದ ಎಮ್ ಜಿ ರಸ್ತೆ ಮಾರ್ಗವಾಗಿ ಪಂಜಿನ ಮೆರವಣಿಗೆ ಪ್ರತಿಭಟನೆ ನಡೆದಿದ್ದು, ಉಗ್ರರ ಪ್ರತಿಕೃತಿ ದಹಿಸಿ ಆಕ್ರೋಶ ಹೊರ ಹಾಕಿದ್ದಾರೆ. ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಭಾಗಿಯಾಗಿದ್ದರು.