Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಜನಾಕ್ರೋಶ ಕೇವಲ ರಾಜಕೀಯವಾಗಿಯೇ ಹೊರತು, ಜನರಲ್ಲಿ ಆಕ್ರೋಶ ಇಲ್ಲ: ಸಿಎಂ ಸಿದ್ದರಾಮಯ್ಯ

    By Author AINMay 23, 2025
    Share
    Facebook Twitter LinkedIn Pinterest Email
    Demo

    ಕೆ.ಆರ್.ನಗರ: ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರೇ ಮಾಲೀಕರು. ಕ್ಷೇತ್ರಗಳ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಹಾಗೂ ಶಾಸಕರ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕೆ.ಆರ್. ನಗರ ವಿಧಾನಸಭಾ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ 404 ಕೋಟಿ ರೂ.ಗಳ ಶಂಕುಸ್ಥಾಪನೆ ,

    ಹೊಸ ಬಟ್ಟೆ ಬಣ್ಣ ಬಿಡುತ್ತೆ ಅನ್ನೋ ಭಯ ಇದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ! ರಿಸಲ್ಟ್ ಪಕ್ಕಾ

    109 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಸೇರಿ ಒಟ್ಟು 513 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಉದ್ಗಾಟನೆ ಮತ್ತು ಶಂಕುಸ್ಥಾಪನೆ ನೆರವೇರಿದ್ದು, ಇದಕ್ಕೆ ಸ್ಥಳೀಯ ಶಾಸಕರಾದ ರವಿಶಂಕರ್ ಕಾರಣ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಸಣ್ಣ ನೀರಾವರಿ ಸಚಿವರು 197 ಕೋಟಿ ರೂ.ಗಳ ವೆಚ್ಚದ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ತಮ್ಮ ಇಲಾಖೆಯೊಂದರಲ್ಲಿಯೇ ಮಾಡಿದ್ದಾರೆ. ಆರೋಗ್ಯ ಇಲಾಖೆಯಡಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ನೆರವೇರಿದೆ ಎಂದರು.

    ಪಾಪರ್ ಸರ್ಕಾರವಾಗಿದ್ದರೆ 513 ಕೋಟಿ ರೂ.ಗಳ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿತ್ತೇ?

    ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದರಿಂದ ಅಭಿವೃದ್ಧಿ ಕಾರ್ಯಗಳಿಗೆ ಈ ಸರ್ಕಾರದ ಬಳಿ ಹಣವಿಲ್ಲ ಎಂದು ಟೀಕಿಸುತ್ತಾರೆ. ಪಾಪರ್ ಸರ್ಕಾರವಾಗಿದ್ದರೆ 513 ಕೋಟಿ ರೂ.ಗಳ ಕಾಮಗಾರಿಗಳನ್ನು ಇಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಬಿಜೆಪಿ ಮತ್ತು ಜೆಡಿಎಸ್ ಅಧಿಕಾರದಲ್ಲಿದ್ದಾಗ ಏನೂ ಮಾಡಲಿಲ್ಲ. ಆದರೆ ಟೀಕೆ ಮಾಡುವುದನ್ನು ಹಾಗೂ ಸುಳ್ಳು ಹೇಳುವುದನ್ನು ಮಾತ್ರ ಬಿಡುವುದಿಲ್ಲ.

    ಬಿಜೆಪಿ ಜೆಡಿಎಸ್ ಪಕ್ಷಗಳು ಹೇಳಿಕೊಂಡಿರುವ ಚಾರ್ಜ್ ಶೀಟ್ ನಲ್ಲಿ ಬರೀ ಸುಳ್ಳುಗಳನ್ನೇ ಹೇಳಿದ್ದಾರೆ. ಹೀಗೆ ಅವರಿಗೆ ಸುಳ್ಳು ಹೇಳಲು ನಾಚಿಕೆಯಾಗುವುದಿಲ್ಲವೇ ಎಂದರು. ಆರ್.ಅಶೋಕ್, ಹೆಚ್. ಡಿ. ಕುಮಾರ್ ಸ್ವಾಮಿ, ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಇವರೆಲ್ಲರೂ ಬಹಳ ವರ್ಷಗಳಿಂದ ರಾಜಕೀಯದಲ್ಲಿದ್ದು, ಸುಳ್ಳು ಹೇಳುತ್ತಿದ್ದಾರೆ.

    ಪಂಚ ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿ ಮಾಡಿದೆ. ಜನರು ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳುತ್ತಿರುವಾಗ ಸುಳ್ಳು ಎಂದು ಹೇಗೆ ಹೇಳುತ್ತಾರೆ ಎಂದರು. ರಾಜ್ಯದ 3.50 ಕೋಟಿ ಮಹಿಳೆಯರು ಯಾವುದೇ ಬೇಧ ಭಾವವಿಲ್ಲದೇ ಶಕ್ತಿ ಯೋಜನೆಯನ್ನು ಬಳಸಿಕೊಂಡಿದ್ದಾರೆ. ಬಿಜೆಪಿ ಸರ್ಕಾರ ಇಂಥ ಯೋಜನೆಯನ್ನು ಜಾರಿ ಮಾಡಿತ್ತೇ? ಎಂದು ಪ್ರಶ್ನಿಸಿದ ಸಿಎಂ ಈವರೆಗೆ 500 ಕೋಟಿ ಮಹಿಳೆಯರು ಉಚಿತವಾಗಿ ಓಡಾಡಿದ್ದಾರೆ. ಪ್ರತಿ ದಿನ 50-60 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.

    ಜಿಎಸ್ ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ

    ಜಿಎಸ್ ಟಿ ಸಂಗ್ರಹಣೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಮುಂದಿನ ವರ್ಷ ನಾವು ಮೊದಲ ಸ್ಥಾನಕ್ಕೆ ಬರುವ ಪ್ರಯತ್ನ ಮಾಡುತ್ತೇವೆ ಎಂದ ಮುಖ್ಯಮಂತ್ರಿಗಳು, ಕಬಿನಿ ಸೇತುವೆಗೆ 25 ಕೋಟಿ ರೂ.ಗಳ ಅನುದಾನವನ್ನು ಒದಗಿಸಲಾಗಿದೆ . ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ ಗುತ್ತಿಗೆ ನೀಡಲಾಗಿದೆ. ಸಾಗರಕಟ್ಟೆ ಸೇತುವೆ, ರಸ್ತೆ ಅಗಲೀಕರಣ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗಿದೆ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಇರಬೇಕೆಂಬುದು ಸರ್ಕಾರದ ಆಶಯ ಎಂದರು.

    ಜನಾಕ್ರೋಶ ಕಾರ್ಯಕ್ರಮ ಮೂಲಕ ಬಿಜೆಪಿ ಸುಳ್ಳು ಪ್ರಚಾರ

    ಶಕ್ತಿ ಯೋಜನೆಯಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿರುವುದನ್ನು ಪ್ರಶಂಸಿಸಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿದ್ದರು. ಗ್ಯಾರಂಟಿ ಯೋಜನೆಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚೆಗೆ ಹೊಸಪೇಟೆಯಲ್ಲಿ ನಡೆದ ಸರ್ಕಾರದ ಎರಡು ವರ್ಷದ ಕಾರ್ಯಕ್ರಮ ಯಶಸ್ವಿಯಾಗಿ ನಡೆದು, ಸುಮಾರು 3 ರಿಂದ 4 ಲಕ್ಷ ಜನ ಆಗಮಿಸಿದ್ದರು.

    ಆದರೆ ಬಿಜೆಪಿಯವರು ಜನಾಕ್ರೋಶ ಕಾರ್ಯಕ್ರಮ ಮಾಡಿ, ಅಭಿವೃದ್ಧಿ ನಡೆಯುತ್ತಿಲ್ಲ, ಬೆಲೆ ಏರಿಕೆಯಾಗಿದೆ ಎಂಬ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಯಾವ ಕೆಲಸವನ್ನೂ ಮಾಡದೇ, ಕಾಂಗ್ರೆಸ್ ಸರ್ಕಾರದ ಯಶಸ್ಸಿಗೆ ಮರುಗುತ್ತಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಶಕ್ತಿ ಯೋಜನೆ , ನಂತರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತರಲಾಯಿತು. ತದನಂತರ ಜನವರಿ 2024 ರಲ್ಲಿ ಯುವನಿಧಿಯನ್ನು ಜಾರಿಗೊಳಿಸಲಾಗಿದ್ದು, ಇದಕ್ಕಾಗಿ 52000 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂದರು.

    ನುಡಿದಂತೆ ನಡೆದ ಸರ್ಕಾರದ ಮೇಲೆ ಜನರ ವಿಶ್ವಾಸ

    ಇದುವರೆಗೆ ಗ್ಯಾರಂಟಿಗಳಿಗೆ 90 ಸಾವಿರ ಕೋಟಿ ರೂ.ಗಳು ವೆಚ್ಚವಾಗಿದೆ. 60 ಸಾವಿರ ಕೋಟಿ ರೂ.ಗಳಿಗೆ ವಿವಿಧ ಪಿಂಚಣಿಗಳು, 7 ನೇ ವೇತನ ಆಯೋಗ, ವಿದ್ಯುತ್ ಸಬ್ಸಿಡಿ ಸೇರಿದಂತೆ ವಿವಿಧ ಜನೋಪಯೋಗಿ ಯೋಜನೆಗಳಿಗೆ ಒಟ್ಟು 1.12 ಲಕ್ಷ ಕೋಟಿಗಳನ್ನು ವೆಚ್ಚಮಾಡಲಾಗಿದೆ. 2 .06 ಲಕ್ಷ ಕೋಟಿ ಗಳ ಸವಲತ್ತುಗಳನ್ನು ಕೃಷಿಯ ವಿವಿಧ ಯೋಜನೆಗಳಿಗೆ ನೀಡಲಾಗಿದೆ. ಮೈಸೂರು ಭಾಗದ ಕೃಷಿಕರು ಕೃಷಿಯನ್ನು ವೈಜ್ಞಾನಿಕವಾಗಿ ಮಾಡಬೇಕು. ಉತ್ತಮ ಯಂತ್ರೋಪಕರಣ,ಬೀಜ ಗೊಬ್ಬರ ನೀಡಲಾಗುತ್ತಿದೆ. ರೈತರು ಯಂತ್ರೋಪಕರಣ ಬಳಸಿ, ಉತ್ತಮ ರೀತಿಯಲ್ಲಿ ಬೆಳೆ ಬೆಳೆಯಬೇಕು. ಜನಾಕ್ರೋಶ ಕೇವಲ ರಾಜಕೀಯವಾಗಿಯೇ ಹೊರತು, ಜನರಲ್ಲಿ ಆಕ್ರೋಶ ಇಲ್ಲ. ನುಡಿದಂತೆ ನಡೆಯುವ ನಮ್ಮ ಸರ್ಕಾರದ ಮೇಲೆ ಜನರು ತಮ್ಮ ವಿಶ್ವಾಸವನ್ನು ತೋರಿದ್ದಾರೆ ಎಂದರು.

    ಬಿಜೆಪಿ ಅವಧಿಯಲ್ಲಿ ಹಣದ ಲೂಟಿ ನಡೆದಿದೆ

    ಹಿಂದೆ ನಮ್ಮ ಸರ್ಕಾರ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಪ್ರಸ್ತುತ ನಮ್ಮ ಸರ್ಕಾರ 593 ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಿದ್ದು, 242 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಸರ್ಕಾರ ಇನ್ನುಳಿದ ವರ್ಷಗಳಲ್ಲಿ ಉಳಿದ ಎಲ್ಲ ಭರವಸೆಗಳನ್ನೂ ಈಡೇರಿಸಲಿದೆ. ಬಿಜೆಪಿಯವರು ತಮ್ಮ ಅಧಿಕಾರಾವಧಿಯಲ್ಲಿ ಹಣ ಲೂಟಿ ಹೊಡೆದರು. 270000 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಹಣವಿಲ್ಲದೇ ಮಂಜೂರಾತಿ ನೀಡಿದರು. ಬಿಜೆಪಿಯ ಬಸವರಾಜ ಬೊಮ್ಮಾಯಿಯವರು ತಮ್ಮ ಅವಧಿಯಲ್ಲಿ 166000 ಕೋಟಿ ರೂ. ಯೋಜನೆಗಳಿಗೆ ಹಣವಿಲ್ಲದೇ ಮಂಜೂರು ಮಾಡಿದ ಫಲವಾಗಿ , ನಮ್ಮ ಸರ್ಕಾರದ ಬಾಕಿ ಮೊತ್ತವನ್ನು ಪಾವತಿಸುತ್ತಿದೆ ಎಂದರು.

    ಕೇಂದ್ರದ ಬೆಲೆ ಏರಿಕೆ ಬಗ್ಗೆ ಬಿಜೆಪಿ ಮಾತನಾಡುವುದಿಲ್ಲ

    ಕೆ.ಆರ್.ನಗರದ ಶಾಸಕರು ಪ್ರಾಮಾಣಿಕರಾಗಿದ್ದು, ಕ್ಷೇತ್ರದ ಒಳಿತಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ಮುಂದಿನ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಜನರಲ್ಲಿ ಮುಖ್ಯಮಂತ್ರಿಗಳು ಮನವಿ ಮಾಡಿದರು. ಹಾಲಿನ ದರ ಏರಿಕೆಯಾಗಿದ್ದು, ಹೆಚ್ಚಿನ ಮೊತ್ತ ರೈತರಿಗೆ ತಲುಪುತ್ತಿದೆಯೇ ಹೊರತು, ಸರ್ಕಾರದ ಬೊಕ್ಕಸಕ್ಕೆ ಬರುತ್ತಿಲ್ಲ. ನೆರೆರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದಲ್ಲಿ ಹಾಲಿನ ದರ ಕಡಿಮೆಯಿದೆ. ಬಿಜೆಪಿಯವರು ಕೇಂದ್ರದಲ್ಲಿ ಹೆಚ್ಚಿಸಿರುವ ದರಗಳ ಬಗ್ಗೆ ಮಾತನಾಡುವುದಿಲ್ಲ. ಡೀಸೆಲ್ ಬೆಲೆ ಹಿಂದೆ ಇದ್ದ 46 ರೂ. ಇದ್ದ ಬೆಲೆ , ಈಗ 91 ರೂ.ಗಳಿಗೆ ಹೆಚ್ಚಳವಾಗಿದೆ ಎಂದರು.

    ಉಸ್ತುವಾರಿ ಸಚಿವ ಡಾ: ಹೆಚ್.ಸಿ ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್, ದಿನೇಶ್ ಗುಂಡೂರಾವ್, ಬೋಸರಾಜು, ಬೈರತಿ ಸುರೇಶ್, ಶಾಸಕರಾದ ರವಿಶಂಕರ್, ವಿಧಾನ ಪರಿಷತ್ ಸದಸ್ಯ ಡಾ: ತಿಮ್ಮಯ್ಯ, ಕೆ.ಆರ್.ನಗರ ಪುರಸಭೆ ಅಧ್ಯಕ್ಷ ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

    Post Views: 6

    Demo
    Share. Facebook Twitter LinkedIn Email WhatsApp

    Related Posts

    ತಮನ್ನಾನೂ ಬೇಡ, ಸುಮನ್ನಾನೂ ಬೇಡ. ಬೇಕಿದ್ರೆ ನಾನೇ ಉಚಿತವಾಗಿ ರಾಯಭಾರಿಯಾಗ್ತೀನಿ: ವಾಟಾಳ್ ನಾಗರಾಜ್

    May 23, 2025

    ಮದ್ದೂರು ನಗರಸಭೆಯಾಗಿ ಮೇಲ್ದರ್ಜೆಗೆ: CM, DCMಗೆ ಅಭಿನಂದನೆ ಸಲ್ಲಿಸಿದ ಶಾಸಕ ಕೆ.ಎಂ.ಉದಯ್

    May 23, 2025

    ಡಿಕೆಶಿಗೆ ಅದ್ಧೂರಿ ವೆಲ್‌ ಕಂ : ಕೈʼ ಕಾರ್ಯಕರ್ತರಿಗೆ ಸೇನೆಗೆ ಫ್ರೀ ಪೆಟ್ರೋಲ್ ಭಾಗ್ಯ..! (video)

    May 23, 2025

    ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀ.ಗೆ ಹೆಚ್ಚಿಸಲು ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ: ಡಿ.ಕೆ. ಶಿವಕುಮಾರ್

    May 23, 2025

    ರಾಮನಗರ ಮರುನಾಮಕರಣ: ರಾಜ್ಯ ಸರ್ಕಾರಕ್ಕೆ ತೀರ್ಮಾನಿಸುವ ಅಧಿಕಾರವಿದೆ: ಸಿಎಂ ಸಿದ್ದರಾಮಯ್ಯ

    May 23, 2025

    ಅವನೊಬ್ಬ ಮೆಂಟ್ಲು.. ಮಾನಸಿಕ ಆರೋಗ್ಯ ಹದಗೆಟ್ಟಿರಬೇಕು: ಹೇಳಿದ್ಯಾರು ಗೊತ್ತಾ..?

    May 23, 2025

    ನ್ಯಾಷನಲ್ ಹೆರಾಲ್ಡ್’ಗೆ ರಾಜಾರೋಷವಾಗಿ 25 ಲಕ್ಷ ಕೊಟ್ಟಿದ್ದೇವೆ: ಡಿ.ಕೆ.ಶಿವಕುಮಾರ್

    May 23, 2025

    SSLC ಮರು ಮೌಲ್ಯಮಾಪನ: ಪೂರ್ಣ ಪ್ರಜ್ಞಾ ಶಾಲೆಯ ವಿದ್ಯಾರ್ಥಿನಿ ಸಿ.ಪುನೀತಾ ರಾಜ್ಯಕ್ಕೆ ಪ್ರಥಮ

    May 23, 2025

    Accident News: ಕಾರು ಡಿಕ್ಕಿಯಾಗಿ ಬ್ಯಾಂಕ್‌ ಮ್ಯಾನೇಜರ್‌ ಸಾವು, ಪತ್ನಿ-ಮಗಳು ಗಂಭೀರ

    May 23, 2025

    Accident News: ಚಿತ್ರದುರ್ಗದಲ್ಲಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು..!

    May 23, 2025

    ಗ್ಯಾಂಗ್ ರೇಪ್ ಆರೋಪಿಗಳು ಜೈಲಿನಿಂದ ರಿಲೀಸ್.. ಭರ್ಜರಿ ರೋಡ್ ಶೋ ಮಾಡಿ ಬಿಲ್ಡಪ್ – Video Viral

    May 23, 2025

    ಗುಪ್ತಚರ ಅಧಿಕಾರಿ ಮುರಳೀಧರಗೆ ಡಿಜಿ-ಐಜಿಪಿ ಪ್ರಶಂಸನಾ ಪದಕ

    May 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.