ದಾವಣಗೆರೆ: ಆಟೋ ಬಾಡಿಗೆ ವಿಚಾರಕ್ಕೆ ಗಲಾಟೆ ನಡೆಸಿ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ದಾವಣಗೆರೆಯ ನಿಟ್ಟುವಳ್ಳಿಯಲ್ಲಿನಡೆದಿದೆ.
ಕೊಳೆನಹಳ್ಳಿ ಚಂದ್ರಯ್ಯ (27) ಹಲ್ಲೆಗೊಳಗಾದ ಆಟೋ ಚಾಲಕ. ಕಳೆದ ಸೋಮವಾರ ರಾತ್ರಿ ಬಾರ್ನಲ್ಲಿ ಕುಡಿದು ಮನೆಗೆ ಹೋಗಲು ಇಬ್ಬರು ಕುಡುಕರು ಆಟೋ ಏರಿದ್ದಾರೆ. ಬಳಿಕ ಬಾಡಿಗೆ ಹಣ ಜಾಸ್ತಿ ಹೇಳ್ತಿದ್ದೀಯಾ ಎಂದು ಆಟೋ ಚಾಲಕನನ್ನು ಥಳಿಸಿ, ಬಾಟಲ್ನಿಂದ ತಲೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕೂಡಲೇ ಸ್ಥಳೀಯರು ಹಲ್ಲೆಗೊಳಗಾದ ಆಟೋ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಂದ್ರಯ್ಯಗೆ ಚಿಕಿತ್ಸೆ ನೀಡಲಾಗುತ್ತಿದೆ.ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.