ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ನಿವಾಸದಲ್ಲಿ ತ್ವರಿತವಾಗಿ ರಬಕವಿ ಮಹಿಷವಾಡಗಿ ಬ್ರಿಡ್ಜ್ ನಿರ್ಮಾಣ ಮಾಡಬೇಕೆಂದು ರಬಕವಿ ದೈವ ಮಂಡಳಿ ಹಿರಿಯರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು. ಅದಕ್ಕೆ ಸ್ಪಂದಿಸಿ ಮಾತನಾಡಿದ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಸುದ್ದಿಗಾರರೊಂದಿಗೆ ಮಾತನಾಡಿ 2018 ರಲ್ಲಿ ಪ್ರಾರಂಭಗೊಂಡ ರಬಕವಿ ಮಹಿಷವಾಡಗಿ ಬ್ರಿಡ್ಜ್ ಇನ್ನೂ ಕಾಮಗಾರಿ ಮುಗಿಸಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ರಬಕವಿ ಮಹಿಷವಾಡಗಿ ಬ್ರಿಡ್ಜ್ ೨೦೨೫ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಬೇಕು. ಇಲ್ಲ ಅಂದ್ರೆ ನಿಮ್ಮ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಖಡಕ ವಾರ್ನಿಂಗ್ ನೀಡಿದರು,
ನಾನು ಈಗಾಗಲೇ ಸಂಬಂಧಪಟ್ಟ ಇಂಜಿನಿಯರಗಳ ಜೊತೆ ಮೂರ್ನಾಲ್ಕು ಮೀಟಿಂಗ್ ಮಾಡಿದ್ದೇನೆ ನಮ್ಮ ಅಧಿಕಾರಿಗಳ ಬೇಜವಾಬ್ದಾರಿತನ ರಬಕವಿ ಮಹಿಷವಾಡಗಿ ಬ್ರಿಡ್ಜ್ ಕಾಮಗಾರಿ ವಿಳಂಬವಾಗಿದೆ 2025 ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣ ಕಾಮಗಾರಿ ಮುಗಿಸುತ್ತೇನೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರಬಕವಿ ದೈವ ಮಂಡಳಿ ಹಿರಿಯರಾದ ರಾಮಣ್ಣ ಹುಲಕುಂದ. ನೀಲಕಂಠ ಮುತ್ತುರ. ರವಿ ಗದಾಡ.ಡಾ ರವಿ ಜಮಖಂಡಿ. ಸಂಜು ತೇಲಿ. ಸಂಗಪ್ಪ ಮಡಿವಾಳ. ಬಾಲು ಹೂಗಾರ. ಆನಂದ ಜುಗಳಿ. ಅಮಿತ ನಾಶಿ. ಪಿಂಟು ಕುಂಬಾರ. ಕಿರಣ ದೇಸಾಯಿ. ಸೋಯಲ್ ಅತ್ತಾರ. ಸೇರಿದಂತೆ ಮುಂತಾದವು ಪಾಲ್ಗೊಂಡಿದ್ದರು