ಸ್ಯಾಂಡಲ್‌ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಹೊಸ ಲುಕ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಉಗಾದಿ ಹಬ್ಬದ ವಿಶೇಷವಾಗಿ ವಿಭಿನ್ನವಾಗಿ, ಮಾದಕವಾಗಿ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದಾರೆ.ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ರಾಗಿಣಿ ದುಂಡು ಮಲ್ಲಿಗೆ ರವಿಕೆ ತೊಟ್ಟು ಸ್ಪೆಷಲ್ ಆಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ದುಂಡು ಮಲ್ಲಿಗೆ ಹೂವುಗಳಿಂದ ತಯಾರಾದ ಬ್ಲೌಸ್, ಗೋಲ್ಡನ್ ಬಣ್ಣದ ಸೀರೆಯುಟ್ಟು ಬೋಲ್ಡ್ ಅಂಡ್ ಬಿಂದಾಸ್ ಆಗಿ ಕ್ಯಾಮೆರಾಗೆ ತುಪ್ಪದ ಬ್ಯೂಟಿ ಪೋಸ್ ಕೊಟ್ಟಿದ್ದಾರೆ. ಹೊಸ ವರ್ಷ, ಹೊಸ ಚಾಪ್ಟರ್, ನಿರೀಕ್ಷೆಯೊಂದಿಗೆ ಪ್ರತಿ ಬೆಳಗಿನ ಜಾವವು ಹೊಸ ಅವಕಾಶ ನೀಡುತ್ತದೆ. ಅದನ್ನೇ ಅದ್ಭುತವಾಗಿ ರೂಪಿಸಿಕೊಳ್ಳಿ, ಬದುಕಿನಲ್ಲಿ ಯಶಸ್ಸು, ಸಮೃದ್ಧಿ ಸಿಗಲಿ ಎಂದು ನಟಿ ರಾಗಿಣಿ ದ್ವಿವೇದಿ ಯುಗಾದಿಗೆ ಶುಭ ಕೋರಿದ್ದಾರೆ.
ರಾಗಿಣಿ ಬಹುಭಾಷಾ ನಟಿ. ಕನ್ನಡ ಮಾತ್ರವಲ್ಲ ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಸದ್ಯ ಹೊಸ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಸದ್ಯ ರಾಗಿಣಿ ಹೊಸ ಫೋಟೋಶೂಟ್ ನೋಡಿ ಅಭಿಮಾನಿಗಳು ಓ ಮಲ್ಲಿಗೆ ಅಂತಾ ಹಾಡು ಹಾಡುತ್ತಿದ್ದಾರೆ.