ಕಾರವಾರ: ಉತ್ತರಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಘಟ್ಟ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆ ಆರ್ಭಟಿಸುತ್ತಿದೆ. ಕಳೆದ ರಾತ್ರಿ ಕರಾವಳಿ ತಾಲೂಕಿನಲ್ಲಿ ಮಳೆ ವ್ಯಾಪಕವಾಗಿ ಬೀಳುತ್ತಿರುವ ಪರಿಣಾಮವಾಗಿ ಕಾರವಾರದ ಹಲವು ಕಡೆಗಳಲ್ಲಿ ನೀರು ತುಂಬಿ ಆತಂಕ ಸೃಷ್ಟಿಯಾಗಿತ್ತು.
ಕಾರವಾರ ನಗರದ ಬ್ರಾಹ್ಮಣ ಗಲ್ಲಿ, ಹೈ ಚರ್ಚ್ ರಸ್ತೆ ಸೇರಿದಂತೆ ಹಲವೆಡೆಗಳಲ್ಲಿ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನೂ ವ್ಯಾಪಕವಾಗಿ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಇಂದು ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಾದ ಕಾರವಾರ,
ಕಂಕುಳಿನ ಕಪ್ಪು ಕಲೆ ಬೆಳ್ಳಗಾಗಬೇಕಾ!? ಹಾಗಿದ್ರೆ ಶಾಂಪೂಗೆ ಈ ಪದಾರ್ಥ ಮಿಕ್ಸ್ ಮಾಡಿ ಹಚ್ಚಿ!
ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಅಂಗನವಾಡಿ ಸೇರಿದಂತೆ ಶಾಲಾ ಕಾಲೇಜುಗಳಿಗೆ ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ರಜೆಯನ್ನು ಘೋಷಿಸಿ ಆದೇಶ ಮಾಡಿದ್ದಾರೆ. ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಆವರಿಸಿಕೊಂಡಿದೆ. ಮಳೆ ಇನ್ನಷ್ಟು ಹೆಚ್ಚಿದ್ದಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.