Close Menu
Ain Live News
    Facebook X (Twitter) Instagram YouTube
    Tuesday, May 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಮಳೆ‌ ನೀರಿನಿಂದ ಅವಾಂತರ; ನಗರದ ಶೇ.70ರಷ್ಟು ‌ಪ್ರದೇಶಗಳ ಸಮಸ್ಯೆ ‌ನಿವಾರಣೆ: ಡಿಸಿಎಂ ಡಿ.ಕೆ.ಶಿವಕುಮಾರ್!

    By AIN AuthorMay 20, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- “ಮಳೆ ನೀರಿನಿಂದ ಉಂಟಾಗುವ ಅವಘಡಗಳನ್ನು ತಪ್ಪಿಸಲು ಮೊದಲೇ ಸಜ್ಜಾಗಿದ್ದೆವು. ನಾವು ಶೇ. 70 ರಷ್ಟು ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇವೆ. ಈಗಾಗಲೇ ಇಡೀ ಬೆಂಗಳೂರಿನಾದ್ಯಂತ 197 ಕಿಮೀ ಉದ್ದದ ಮಳೆನೀರುಗಾಲುವೆ ನಿರ್ಮಾಣದ ಕೆಲಸ ನಡೆಯುತ್ತಿದೆ.” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

    ಸಿಡಿಲು ಬಡಿದು 65 ವರ್ಷದ ವೃದ್ಧ ದುರ್ಮರಣ!

    ಬಿಬಿಎಂಪಿ ಮುಖ್ಯ ಕಚೇರಿಯ ವಾರ್ ರೂಮಲ್ಲಿ ಮಾಧ್ಯಮದವರ ಜತೆ ಸೋಮವಾರ ಮಾತನಾಡಿದರು.

    “ನಾನು ಬೆಂಗಳೂರಿನ ಜವಾಬ್ದಾರಿ ತೆಗೆದುಕೊಂಡ ನಂತರ ಮಳೆ ನೀರಿನಿಂದ ತೊಂದರೆಗೆ ಒಳಗಾಗುತ್ತಿದ್ದ 210 ಪ್ರದೇಶಗಳನ್ನು ಗುರುತಿಸಲಾಯಿತು. 166 ಪ್ರದೇಶಗಳಲ್ಲಿನ ಸಮಸ್ಯೆಗಳನ್ನು ನಿವಾರಣೆ ‌ಮಾಡಲಾಗಿದೆ. ಇನ್ನು 44 ಪ್ರದೇಶಗಳಲ್ಲಿ ಕೆಲಸ ಬಾಕಿಯಿದ್ದು ಇದರಲ್ಲಿ 24  ಪ್ರದೇಶಗಳಲ್ಲಿ ಕೆಲಸ ನಡೆಯುತ್ತಿದೆ. ಸಂಚಾರಿ ಪೊಲೀಸರು ಮಳೆ ಬಂದಾಗ ಸಮಸ್ಯೆ ಉಂಟಾಗುವ 132 ಪ್ರದೇಶಗಳನ್ನು ಗುರುತಿಸಿದ್ದಾರೆ. ಇದರಲ್ಲಿ ಏಪ್ರಿಲ್ ವೇಳೆಗೆ 82 ಪ್ರದೇಶಗಳಲ್ಲಿ ಸಮಸ್ಯೆ ನಿವಾರಣೆ ಮಾಡಿದ್ದೇವೆ. 41 ಕೆಲಸಗಳು ಬಾಕಿ ಉಳಿದಿವೆ. ಮಳೆನೀರುಗಾಲುವೆಗೆ ಎಂದೇ 2 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ” ಎಂದು ಹೇಳಿದರು.

    “ಮಳೆ ಎಂಬುದು ಪ್ರಕೃತಿಯ ನಿಯಮ. ನಾವು ಜನಸಾಮಾನ್ಯರ ಬದುಕಿನ ಬಗ್ಗೆ ಕಾಳಜಿ ಹೊಂದಿದ್ದೇವೆ. ಉಂಟಾಗಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಬೆಂಗಳೂರಿನ ಜನತೆ ಯಾವುದೇ ಕಾರಣಕ್ಕೂ ಗಾಬರಿಗೆ ಒಳಗಾಗುವುದು ಬೇಡ” ಎಂದರು.

    “ದುರಾದೃಷ್ಟವಶಾತ್ ಮಹಿಳೆಯೊಬ್ಬರ ಮೇಲೆ ಖಾಸಗಿ ಪ್ರದೇಶದಲ್ಲಿದ್ದ ಕಟ್ಟಡದ ಗೋಡೆ ಬಿದ್ದು ಮೃತಪಟ್ಟಿದ್ದಾರೆ. ನಮಗೂ ನಮ್ಮ ಜವಾಬ್ದಾರಿಯ ಬಗ್ಗೆ ಅರಿವಿದೆ” ಎಂದು ಬೇಸರ ವ್ಯಕ್ತಪಡಿಸಿದರು.

    “ಸಿಲ್ಕ್‌ ಬೋರ್ಡ್, ಹೆಬ್ಬಾಳದ‌ ನಂತರದ‌ ಭಾಗ, ಯಲಹಂಕ ಇಲ್ಲೆಲ್ಲೇ ಹೆಚ್ಚು ಮಳೆ ಸುರಿದಿದೆ. ಇಲ್ಲಿ ಒಂದೆರಡು ಕಡೆ ರೈಲ್ವೇ ಅಂಡರ್ ಪಾಸ್ ಕೆಲಸ ನಡೆಯುತ್ತದೆ. ಆದ ಕಾರಣ ನೀರು ನಿಂತು ಹೆಚ್ಚು ತೊಂದರೆಯಾಗುತ್ತಿದೆ. ಆದ್ದರಿಂದ ಆ ಇಲಾಖೆಯವರ ಜೊತೆ ಸಮನ್ವಯ ಸಾಧಿಸಿ ಕೆಲಸ ಮಾಡಲಾಗುವುದು” ಎಂದರು.

    *ಹತಾಶೆಯ ಮನುಷ್ಯರು*

    ಕುಮಾರಸ್ವಾಮಿ ಗ್ರೇಟರ್ ಬೆಂಗಳೂರಲ್ಲ ಲೂಟರ್ ಬೆಂಗಳೂರು ಎಂದು ಕರೆದಿರುವ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಹಾಗೂ ಬಿಜೆಪಿಯ ನಾಯಕರು ಹತಾಶೆಯ ಮನುಷ್ಯರು” ಎಂದರು.

    ನಿಮ್ಮನ್ನ ಅಥವಾ ಸರ್ಕಾರವನ್ನು ನೋಡಿ ಹತಾಶೆಗೆ ಒಳಗಾಗಿದ್ದಾರೆಯೇ ಎಂದಾಗ, “ನಾನು ಹಾಗೂ ಸರ್ಕಾರ ಎರಡೂ ನೋಡಿ ಹತಾಶರಾಗಿದ್ದಾರೆ. ನಾವು ಇಷ್ಟೊಂದು ಸಾಧನೆ ಮಾಡಿದ್ದೇವೆ. ಅವರಿಗೆ ಏನನ್ನೂ ಹೇಳಿಕೊಳ್ಳಲು ಆಗುತ್ತಿಲ್ಲವಲ್ಲ. ಜೋಕರ್ ಆಟವಾಡಲು ನನಗೆ ಚಾನ್ಸ್ ಸಿಗಲಿಲ್ಲವಲ್ಲ ಎಂದು ಸಂಕಟ” ಎಂದರು.

    ಡಿ.ಕೆ.ಶಿವಕುಮಾರ್ ರಿಯಲ್‌ ಎಸ್ಟೇಟ್‌ ಮಾಡುವವರು ಎನ್ನುವ ಬಿಜೆಪಿಯವರ ಟೀಕೆಯ ಬಗ್ಗೆ ಕೇಳಿದಾಗ, “ನಾನು ಇಲ್ಲಿ ಅದನ್ನು ಮಾತನಾಡುವುದಿಲ್ಲ. ಬೇರೆ ವೇದಿಕೆಯಲ್ಲಿ ಮಾತನಾಡುತ್ತೇನೆ. ಆರ್.ಅಶೋಕ್ ಹಾಗು ವಿರೋಧ ಪಕ್ಷದ ಯಾರನ್ನಾದರೂ ಕರೆಯಿರಿ ಮಾಧ್ಯಮಗಳ ಮುಂದೆಯೇ ಚರ್ಚೆ ನಡೆಸೋಣ” ಎಂದು ತಿರುಗೇಟು ನೀಡಿದರು.

    *ಸವಾಲಿಗೆ ನಾನು ಸಿದ್ಧನಿದ್ದೇನೆ*

    ಗ್ರೇಟರ್‌ ಬೆಂಗಳೂರು ವಾಟರ್ ಬೆಂಗಳೂರಾಗಿದೆ ಎನ್ನುವ ವಿಪಕ್ಷಗಳ ಟೀಕೆಗಳ ಬಗ್ಗೆ ಕೇಳಿದಾಗ,‌ “ನಾವು ಬೆಂಗಳೂರಿನ‌ ಎಷ್ಟು ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇವೆ ಎಂಬುದರ ಬಗ್ಗೆ ನಮ್ಮ ಜೊತೆ ಚರ್ಚೆಗೆ ಅವರುಗಳು ಬರಲಿ.‌‌ ಕೇವಲ ಆರೋಪ ಮಾಡಿ ಹಿಟ್ ಅಂಡ್ ರನ್ ಮಾಡುವುದಲ್ಲ.‌ ಅವರು ಪಟ್ಟಿ ಮಾಡಿಕೊಂಡು ಬರಲಿ. ನಾವು ಸುಮ್ಮನೇ ಕುಳಿತಿದ್ದೇವ ಎಂಬುದು ತಿಳಿಯಲಿ” ಎಂದು ಹೇಳಿದರು.

    ನೀವು ಸವಾಲು ಹಾಕಲು ತಯಾರಿದ್ದೀರಾ ಎಂದು ಕೇಳಿದಾಗ, “ನಾನು ಯಾವಾಗಲೂ ‌ತಯಾರಿದ್ದೇನೆ. ಮಾಧ್ಯಮಗಳಲ್ಲಿಯೇ ಇದಕ್ಕೆ ವೇದಿಕೆ ಸಿದ್ಧ ಮಾಡಿ” ಎಂದರು.

    ವಿರೋಧ ಪಕ್ಷಗಳು ಬೆಂಗಳೂರಿನ ಸ್ಥಿತಿಗೆ ಕಾಂಗ್ರೆಸ್ ಕಾರಣ ಎಂದು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ಅವರ ಕಾಲದಲ್ಲಿ ಏನಾಗಿದೆ ಎಂಬುದನ್ನು ವಿಪಕ್ಷಗಳು ನೋಡಿಕೊಳ್ಳಲಿ.‌ ನಾವಾದರು ಶೇ.70 ರಷ್ಟು ಪ್ರದೇಶಗಳಲ್ಲಿ ಸಮಸ್ಯೆಗಳನ್ನು ನಿವಾರಣೆ ಮಾಡಿದ್ದೇವೆ. ಬೆಂಗಳೂರು ಯೋಜಿತವಾದ ನಗರವಲ್ಲ. ಆದರೂ ನಾವು ನಮ್ಮ ಕರ್ತವ್ಯ ಮಾಡುತ್ತೇವೆ” ಎಂದರು.

    ಸಮಸ್ಯೆ ‌ನಿವಾರಣೆಗೆ ಏನಾದರೂ ಯೋಜನೆಗಳಿವೆಯೇ ಎಂದು ಕೇಳಿದಾಗ, ‌”ಈ ಮೊದಲೇ ನಾವು ಯೋಜನೆ ರೂಪಿಸಿದ್ದೆವು. ಅಧಿಕಾರಿಗಳು ಚೆನ್ನಾಗಿ ಕೆಲಸ ಮಾಡಿದ್ದಾರೆ. ಅದರ ಬಗ್ಗೆ ನನಗೂ ಸಂತಸವಿದೆ. ಅನೇಕ ಅಧಿಕಾರಿಗಳು ತೊಂದರೆಗೆ ಒಳಗಾದ ಸ್ಥಳದಲ್ಲಿದ್ದು ಕೆಲಸ ಮಾಡಿದ್ದಾರೆ” ಎಂದರು.

    ರಸ್ತೆಗಳ ಅಗಲೀಕರಣ ಮಾಡಿ ಸಮಸ್ಯೆಗಳಿಗೆ ಮುಕ್ತಿ ಹಾಡಬಹುದೇ ಎಂದು ಕೇಳಿದಾಗ, “ರಸ್ತೆ ‌ಅಗಲೀಕರಣಕ್ಕೆ‌‌ ಅಕ್ಕಪಕ್ಕದ ಕಟ್ಟಡಗಳನ್ನು ಒಡೆಯಬೇಕಾಗುತ್ತದೆ. ಇದು ಸಾಕಷ್ಟು ವೆಚ್ಚದಾಯಕ‌.‌ ಈಗ ಮೇಲ್ಸೆತುವೆ ಹಾಗೂ ಟನಲ್‌ ರಸ್ತೆಗಳೇ ಪರಿಹಾರ. ಜೊತೆಗೆ ಪರ್ಯಾಯ ಮಾರ್ಗಗಳನ್ನು ಸಹ ಹುಡುಕಾಟ ನಡೆಸುತ್ತಿದ್ದೇವೆ. 1 ಲಕ್ಷ‌ ಕೋಟಿಗೂ ಅಧಿಕ ಹಣವನ್ನು ಮೆಟ್ರೋ, ಫೆರಿಫೆರಲ್‌ ರಿಂಗ್‌ ರಸ್ತೆ, ಬೆಂಗಳೂರು ಅಭಿವೃದ್ಧಿಗೆ ನಾವು ಹೂಡಿಕೆ ಮಾಡಿದ್ದೇವೆ” ಎಂದರು.

    ಪದೇ,‌ ಪದೇ ಮರಗಳು ಬೀಳುತ್ತಿವೆ ಎನ್ನುವುದರ ಬಗ್ಗೆ ಕೇಳಿದಾಗ, “ಮರ‌ ಪಕೃತಿಯ ಅಂಶ. ಸಡಿಲಗೊಂಡ ಮರ, ಒಣಗಿದ ಕೊಂಬೆಗಳನ್ನು ತೆರವುಗೊಳಿಸಲು ತಂಡವೊಂದು ಪ್ರತಿದಿನ ಕೆಲಸ ಮಾಡುತ್ತಿರುತ್ತದೆ. ಒಂದು ಮರವನ್ನು ಏಕಾಏಕಿ ಕತ್ತರಿಸಲು ಆಗುವುದಿಲ್ಲ. ನಾಳೆ ಯಾವ ರೀತಿ ಗಾಳಿ ಬರುತ್ತದೆ ಎಂಬುದು ಯಾರಿಗೂ ಗೊತ್ತಾಗಲ್ಲ. ಟೀಕೆ ಇದ್ದೇ ಇರುತ್ತವೆ. ನಾವು ಕೇವಲ ಕೆಲಸ ಮಾಡುತ್ತೇವೆ” ಎಂದರು.

    ಮಾನ್ಯತಾ ಟೆಕ್‌ ಪಾರ್ಕ್ ಒತ್ತುವರಿ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ವಿಪತ್ತು ನಿರ್ವಹಣಾ ಕೇಂದ್ರಕ್ಕೂ ಎಚ್ಚರಿಕೆ ನೀಡಿದ್ದೆವು. ಈಗ ಅಲ್ಲಿ ಬಗೆದು ನೀರು ಹರಿಯಲು ಅವಕಾಶ ನೀಡಲಾಗಿದೆ.

    Post Views: 4

    Demo
    Share. Facebook Twitter LinkedIn Email WhatsApp

    Related Posts

    BBMP ವಾರ್ ರೂಂಗೆ ಭೇಟಿ ನೀಡಿ ಮಳೆ ಅನಾಹುತಗಳ ಬಗ್ಗೆ ಮಾಹಿತಿ ಪಡೆದ ಸಿಎಂ, ಡಿಸಿಎಂ!

    May 20, 2025

    ಬೆಂಗಳೂರು ಮಳೆ ಅವಾಂತರದ ನಡುವೆ ‘ಸಾಧನ ಸಮಾವೇಶ’: ಸರ್ಕಾರದ ವಿರುದ್ಧ ಟಿಎ ಶರವಣ ಕಿಡಿ!

    May 19, 2025

    ನಾವೇನು ಪ್ರತೀ ತಿಂಗಳು ಗೃಹಲಕ್ಷ್ಮಿ ಹಣ ಕೊಡ್ತೀವಿ ಅಂದಿದ್ದೇವಾ!? ಉಲ್ಟಾ ಮಾತಾಡಿದ ಡಿಕೆಶಿ!

    May 19, 2025

    ಮಳೆ ಅವಾಂತರ: ಬೆಂಗಳೂರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆತಗ್ಗಿಸುವಂತಾಗಿದೆ – ಸಿಟಿ ರವಿ!

    May 19, 2025

    ಕರ್ನಾಟಕದಲ್ಲಿ ಮುಂದಿನ ವಾರ ಭಾರೀ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

    May 19, 2025

    ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ‘ಭೂ ಗ್ಯಾರಂಟಿ’: ಡಿಸಿಎಂ ಡಿ.ಕೆ. ಶಿವಕುಮಾರ್

    May 19, 2025

    ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ಧ ಬಳಕೆ ಕೇಸ್: “ಸುಪ್ರೀಂ”ನಿಂದ ಸಿ.ಟಿ ರವಿಗೆ ಬಿಗ್ ರಿಲೀಫ್!

    May 19, 2025

    Nail Cutting: ಸಂಜೆ ವೇಳೆ ಉಗುರು ಕತ್ತರಿಸುತ್ತೀರಾ..? ಮನೆಗೆ ಬರುವ ಲಕ್ಷ್ಮೀ ವಾಪಸ್ ಹೋಗಬಹುದು

    May 19, 2025

    Bangalore Rains: ಬೆಂಗಳೂರಿನಲ್ಲಿ ಮಧ್ಯಾಹ್ನದಿಂದಲೇ ಮಳೆ ಅಬ್ಬರ: ವಾಹನ ಸವಾರರ ಪರದಾಟ

    May 19, 2025

    ರಾಜ್ಯ ಸರ್ಕಾರ ರೈತರಿಗೆ, ಮಹಿಳೆಯರಿಗೆ, ಯುವಕರಿಗೆ ಯಾವುದೇ ಹೊಸ ಯೋಜನೆ ನೀಡಿಲ್ಲ: ಬಿವೈ ವಿಜಯೇಂದ್ರ

    May 19, 2025

    ಭಾರೀ ಮಳೆಯಾದಾಗ ಗ್ರೇಟರ್ ಬೆಂಗಳೂರು ಮುಳುಗುತ್ತದೆ ಮತ್ತು ಲಘು ಮಳೆಯಾದಾಗ ತೇಲುತ್ತದೆ: HDK ವ್ಯಂಗ್ಯ

    May 19, 2025

    ಮಳೆಯ ಅನಾಹುತಗಳಿಗೆ ಸರ್ಕಾರದ ಬೇಜವಬ್ದಾರಿತನ ಕಾರಣ: ಆರ್. ಅಶೋಕ್ ಆಕ್ರೋಶ

    May 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.