ಬೆಂಗಳೂರು: ಪ್ರತಿದಿನ ಬೆಳಗ್ಗೆದ್ದು ಇಂದು ವಾತಾವರಣ ಹೇಗಿರುತ್ತೋ ಏನೋ ಎಂದು ಜನರು ಊಹಿಸೋದು ಸಾಮಾನ್ಯ ಸಂಗತಿ. ಈ ಹಿನ್ನೆಲೆ ಇಂದು ದೇಶದ ಯಾವ್ಯಾವ ರಾಜ್ಯದಲ್ಲಿ ಮಳೆ, ಚಳಿ, ಬಿಸಿಲು ಇರಲಿದೆ ಅನ್ನೋದರ ಕುರಿತು ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲೂ ಮೇ 17ರಿಂದ ಮಳೆಯ ಅಬ್ಬರ ಜೋರಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕದ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ರಾಯಚೂರು, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯಪುರ ಜಿಲ್ಲೆಗಳಿಗೆ ಭಾರೀ ಮಳೆಯ ಅಲರ್ಟ್ ನೀಡಲಾಗಿದೆ.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಜಗಳೂರು, ಹರಪನಹಳ್ಳಿ, ಬೇಗೂರು, ಕೋಣನೂರು, ಚಿಂತಾಮಣಿ, ಚಿತ್ತಾಪುರ, ಹುಣಸೂರು, ಹೊಸಕೋಟೆ, ರಾಯಲ್ಪಾಡು, ಎಲೆಕ್ಟ್ರಾನಿಕ್ ಸಿಟಿ, ಚಾಮರಾಜನಗರ, ಲಕ್ಷ್ಮೇಶ್ವರ, ಬೀದರ್, ನಾಯಕನಹಟ್ಟಿ, ಹಿರಿಯೂರು, ನಾಪೋಕ್ಲು, ಕಡೂರು, ಅಂಕೋಲಾ, ಚಿಕ್ಕಬಳ್ಳಾಪುರ, ಬೆಂಗಳೂರು ಕೆಐಎಎಲ್, ಕಳಸ, ಶಿಗ್ಗಾಂವ್, ಚಿಟಗುಪ್ಪ, ಲೋಂಡಾ, ಗೋಕರ್ಣದಲ್ಲಿ ಮಳೆಯಾಗಿದೆ.
ಮುಂಗಾರು ಪೂರ್ವ ಮಳೆಯ ಮಧ್ಯೆ, ಈ ಬಾರಿ ಮುಂಗಾರು ಬೇಗನೇ ಶುರುವಾಗಲಿದೆ. ಮುಂಗಾರು 5 ದಿನ ಮುಂಚಿತವಾಗಿ ಆರಂಭವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ.