ಚಿಕ್ಕಮಗಳೂರು:- ಕೊಪ್ಪ ತಾಲೂಕಿನ ಭೈರೇದೇವರು ಗ್ರಾಮದಲ್ಲಿ ಭಾರೀ ಗಾಳಿ ಮಳೆಗೆ ಆಟೋ ಮೇಲೆ ಮರ ಮುರಿದುಬಿದ್ದು, ಚಾಲಕ ಮೃತಪಟ್ಟ ಘಟನೆ ಜರುಗಿದೆ. ರತ್ನಾಕರ್ ಮೃತ ಆಟೋ ಚಾಲಕ. ಭಾರೀ ಗಾಳಿ ಮಳೆಗೆ ಮರ ಆಟೋ ಮೇಲೆ ಬಿದ್ದಿದೆ, ಪರಿಣಾಮ ಆಟೋ ಜಖಂ ಆಗಿದೆ. ಅದರಲ್ಲಿ ಸಿಲುಕಿ ಚಾಲಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ
ನೀವು ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ಹಣ್ಣು ತಿನ್ನುತ್ತೀರಾ!? ಹಾಗಿದ್ರೆ ಈ ಸುದ್ದಿ ನೋಡಿ!
ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಗಾಳಿ ಮಳೆಯ ಅಬ್ಬರ ಮುಂದುವರೆದಿದ್ದು, ನಾಳೆ ಸಹ ಮಳೆ ಮುಂದುವರೆಯಲಿದೆ ಎಂದು ವರದಿಯಾಗಿದೆ.