ಮಂಡ್ಯ:- ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದೆ. ಪರಿಣಾಮ ಜಲಾಶಯಗಳಿಗೆ ಜೀವಕಳೆ ಬಂದಿದೆ. ಅಂತೆಯೇ ಕೆಆರ್‌ಎಸ್ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ಮಕ್ಕಳಿಗೆ ಅನಾರೋಗ್ಯ ಇದ್ದರೇ ಶಿಕ್ಷಕರು ರಜೆ ಕೊಡಬೇಕು: ಶರಣಪ್ರಕಾಶ್ ಪಾಟೀಲ್!
ಬಿಸಿಲಿನ ತಾಪಕ್ಕೆ ಕೆಆರ್ಎಸ್ನ ನೀರಿನ ಪ್ರಮಾಣ 89 ಅಡಿಗೆ ಕುಸಿದಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳ ಆಗಿದೆ. ನಿನ್ನೆಯ ವರೆಗು 150 ಕ್ಯೂಸೆಕ್ ಮಾತ್ರ ಒಳಹರಿವು ಇತ್ತು. ಇಂದು 2053 ಕ್ಯೂಸೆಕ್ ಒಳ ಹರಿವು ಇದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಬೀಳದ ಪರಿಣಾಮ ಕೆಆರ್‌ಎಸ್ ಡ್ಯಾಂನಲ್ಲಿ ಕೇವಲ 15 ಟಿಎಂಸಿ ನೀರು ಇತ್ತು. ಇದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಭಾನುವಾರದಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದ ಡ್ಯಾಂ ಭರ್ತಿಯಾಗುತ್ತದೆ ಎಂಬ ಆಶಾ ಭಾವನೆ ಜನರಲ್ಲಿ ಮೂಡಿದೆ.
ಇದೀಗ ಕೆಆರ್‌ಎಸ್ ಡ್ಯಾಂಗೆ 2,053 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮಂಗಳವಾರಕ್ಕೆ ನೀರಿನ ಪ್ರಮಾಣವು 5,000 ಕ್ಯೂಸೆಕ್‌ಗೆ ಹೆಚ್ಚುವ ಸಾಧ್ಯತೆ ಇದೆ. 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಡ್ಯಾಂನಲ್ಲಿ ಸದ್ಯ 89.35 ಅಡಿ ನೀರು ಇದೆ. ಇನ್ನೂ 49.452 ಟಿಎಂಸಿ ಗರಿಷ್ಠ ಸಾಮರ್ಥ್ಯ ಹೊಂದಿದ್ದು, ಈಗ 15.555 ಟಿಎಂಸಿ ನೀರಿದೆ. ಹೊರ ಹರಿವಿನ ಪ್ರಮಾಣ 347 ಕ್ಯೂಸೆಕ್ ಇದೆ.