ಮಂಗಳೂರು;- ಧಾರಾಕಾರ ಮಳೆಯಿಂದ ನಗರದ ಪಂಪ್ವೆಲ್ ವೃತ್ತ ಮತ್ತೆ ಸಂಪೂರ್ಣ ಮುಳುಗಡೆಯಾಗಿದೆ. ರಸ್ತೆ ಮೇಲೆ ಭಾರೀ ಮಳೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆಗಳು ನದಿಯಂತಾಗಿದ್ದು, ಟ್ರಾಫಿಕ್ ಜಾಮ್ ಆಗಿದೆ.
ಪರಂಗಿ ಹಣ್ಣನ್ನು ಅಪ್ಪಿತಪ್ಪಿಯೂ ಈ ನಾಲ್ಕು ಸಂದರ್ಭಗಳಲ್ಲಿ ಸೇವಿಸಬಾರದು!
ರಸ್ತೆಯಲ್ಲೇ ಭಾರೀ ಪ್ರಮಾಣದ ಮಳೆ ನೀರು ಹರಿಯುತ್ತಿರುವ ಹಿನ್ನೆಲೆ ಸಂಪೂರ್ಣ ರಸ್ತೆ ಸಂಚಾರ ಬಂದ್ ಆಗಿದೆ. ಇದೀಗ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿವೆ. ಮಳೆ ನೀರಿನಲ್ಲೇ ಸಂಚರಿಸಲು ಯತ್ನಿಸಿದ ಖಾಸಗಿ ಬಸ್ಸೊಂದು ನಡುರಸ್ತೆಯಲ್ಲೇ ಕೆಟ್ಟು ನಿಂತಿದ್ದು, ನಂತರ ಸ್ಥಳೀಯರು ಬಸ್ನ್ನು ತಳ್ಳಿ ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾರೆ