ರಾಯಚೂರು:– ಜಿಲ್ಲೆಯ ವಿವಿಧೆಡೆ ಗುಡುಗು, ಗಾಳಿಸಹಿತ ಮಳೆ ಬಿದ್ದಿದ್ದು, ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯ ಜತ್ತಿ ಲೈನ್, ಗಾಂಧಿಮೈದಾನ, ಕಾಕಾ ನಗರದ ಬಳಿ ಗಿಡ ಮರಗಳು ನೆಲಕ್ಕೆ ಉರುಳಿವೆ.
ಬಿಸಿಲು ಹೆಚ್ಚಿದ್ರೂ ಮಡಿಕೆ ನೀರು ತಂಪಾಗಿರಲು ಕಾರಣ ಏನು!? ಇದರ ವಿಶೇಷತೆ ತಿಳಿದಿದ್ದೀರಾ!?
ಹಟ್ಟಿ ಪಟ್ಟಣದ ಹಲವೆಡೆ ಅಲಿಕಲ್ಲು ಬಿದ್ದಿದೆ. ಮರಗಳ ಕೊಂಬೆಗಳು ಮನೆಗಳ ಮೇಲ್ಚಾವಣಿಯ ಮೇಲೆ ಬಿದ್ದು ಅಪಾರ ಹಾನಿಯಾಗಿದೆ. ಅಲ್ಲದೇ ಗುರುಗುಂಟಾ ರಸ್ತೆಯ ಕೋಠಾ ಕ್ರಾಸ್ ಬಳಿಯಲ್ಲಿ ನಿರ್ಮಾಣ ಹಂತದ ದೊಡ್ಡ ವಾಣಿಜ್ಯ ಸಂಕೀರ್ಣ ಉರುಳಿ ಬಿದ್ದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ
ಲಿಂಗಸೂರು ಪಟ್ಟಣದ ಟಾಟಾ ಮೋಟಾರ್ಸ್ ಬಸವ ಕಾರ್ ಷಡ್ ಮೇಲ್ ಚಾವಣಿ ಹಾರಿಹೋಗಿದೆ
ಕೆಲವು ತಗ್ಗು ಪ್ರದೇಶದ ಮನೆಗಳಲ್ಲಿ ಮಳೆ ನೀರು ಹೋಗಿವೆ. ನೀರು ಹೊರಹಾಕಲು ನಿವಾಸಿಗಳು ಹರ ಸಾಹಸ ನಡೆಸಿದರು. ಬೆಳಿಗ್ಗೆಯಿಂದ ಸಂಜೆಯವರೆಗೆ 40 ಡಿಗ್ರಿ ಸೆಲ್ಸಿಯಸ್ ಆಸುಪಾಸು ಬಿಸಿಲಿ ಇದ್ದರಿಂದ ಬಿಸಿಲಿನಿಂದ ಬಸವಳಿದ ಜನರಿಗೆ ಸಂಜೆ 5 ಗಂಟೆಗೆ ಸುರಿದ ಗಾಳಿ ಮಳೆಯಿಂದ ತಂಪೆರಗಿತು.
ಮರಗಳು ಬಿದ್ದ ಕಾರಣ ವಿದ್ಯುತ್ ಕಡಿತವಾಗಿ ಸಾರ್ವಜನಿಕರು ಪರದಾಡಿದರು. ಕೆಲವು ಮನರಗಳ ಟೀನ್ ಶೀಟ್ ಗಳು ಗಾಳಿಗೆ ಹಾರಿ ಹೋಗಿವೆ. ಪಾನ್ ಬೀಡಾ ಡಬ್ಬಾಗಳು ಉರುಳಿಬಿದ್ದಿವೆ.