ಸೂಪರ್‌ಸ್ಟಾರ್ ರಜನಿಕಾಂತ್ ‘ಜೈಲರ್ 2’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ತಮಿಳುನಾಡು-ಕೇರಳ ಗಡಿಯ ಅಟ್ಟಪ್ಪಾಡಿ ಪ್ರದೇಶದಲ್ಲಿ ಕಳೆದ 20 ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇಂದು ಚಿತ್ರೀಕರಣಕ್ಕೆ ತೆರಳುತ್ತಿದ್ದಾಗ ಕೊಯಮತ್ತೂರು ಬಳಿಯ ಅನೈಕಟ್ಟಿ ಬೆಟ್ಟಗಳಲ್ಲಿರುವ ಮಾತೇಶ್ವರನ್ ಶಿವನ್ ದೇವಸ್ಥಾನಕ್ಕೆ ರಜನಿ ಅನಿರೀಕ್ಷಿತವಾಗಿ ಭೇಟಿ ಕೊಟ್ಟಿದ್ದಾರೆ. ರಜನಿ ಆಗಮನ ಸುದ್ದಿ ಕೇಳುತ್ತಿದ್ದ ಅಭಿಮಾನಿಗಳು ಜಮಾಯಿಸಿದ್ದು, ಅವರೊಂದಿಗೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
‘ಜೈಲರ್ 2’ ಸಿನಿಮಾ 2023 ರ ಬ್ಲಾಕ್‌ಬಸ್ಟರ್ ಜೈಲರ್ ಚಿತ್ರದ ಮುಂದುವರಿದ ಭಾಗವಾಗಿದ್ದು, ಈ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಿದ್ದಾರೆ. ಜೈಲರ್‌ನಲ್ಲಿ, ರಜನಿಕಾಂತ್ “ಟೈಗರ್” ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವಣ್ಣ, ರಮ್ಯಾ ಕೃಷ್ಣನ್, ಯೋಗಿ ಬಾಬುಸ ಸೇರಿದಂತೆ ಹಲವರು ಚಿತ್ರದ ಭಾಗವಾಗಿದ್ದಾರೆ. ಜೈಲರ್ 2ಗೂ ಮೊದಲೇ ರಜನಿಯ ಕೂಲಿ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ಈ ಚಿತ್ರಕ್ಕೆ ಲೋಕೇಶ್ ಕನಕರಾಜ್ ಆಕ್ಷನ್ ಕಟ್ ಹೇಳಿದ್ದಾರೆ.