ಕಿರುತೆರೆ ಲೋಕ್ಕೆ ಬೆಳ್ಳಂ ಬೆಳಗ್ಗೆ ಬರಸಿಡಿಲು ಅಪ್ಪಳಿಸಿದೆ. ಕಿಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ಇಂದು ಕೊನೆಯುಸಿರೆಳೆದಿದ್ದಾರೆ. ರಾಕೇಶ್ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಸಿನಿಮಾ ಹಾಗೂ ಸೀರಿಯಲ್ ಲೋಕದಲ್ಲಿ ತಮ್ಮ ನಗುವಿನ ಮೂಲಕ ನೋವು ಮರೆಸುತ್ತಿದ್ದ ರಾಕೇಶ್ ಸದಾ ಅದೊಂದು ಬೇಸರ ಕಾಡುತ್ತಿತ್ತು.
ಕಳೆದ 4 ವರ್ಷಗಳ ಹಿಂದೆ ರಾಕೇಶ್ ಪೂಜಾರಿ ತಂದೆಯನ್ನು ಕಳೆದುಕೊಂಡಿದ್ದರು. ತಂದೆ ಅಗಲಿದ ಸಮಯದಲ್ಲಿ ತಾವು ಜೊತೆಗಿರಲಿಲ್ಲ ಎಂಬ ನೋವು ಅವರನನು ಕಾಡುತ್ತಿತ್ತಂತೆ. ಕಾಮಿಡಿ ಕಿಲಾಡಿ ಚಾಂಪಿಯ್ನ್ ಶಿಪ್ ಸಮಯದಲ್ಲಿ ರಾಕೇಶ್ ತಂದೆ ನಿಧನ ಹೊಂದಿದ್ದರು. ತಂದೆ ನಿಧನರಾಗುವ ವೇಳೆ ರಾಕೇಶ್ ಮನೆಯಲ್ಲಿ ಇರಲಿಲ್ಲ. ಅವರು ಉಜಿರೆ ಕಡೆ ಹೋಗಿದ್ದರಂತೆ. ಬಿಪಿ ಹಾಗೂ ಶೂಗರ್ ಹೆಚ್ಚಾಗಿದ್ದರಿಂದ ವೈದ್ಯರು ಮಣಿಪಾಲ್ಗೆ ಕರೆದುಕೊಂಡು ಹೋಗಿ ಎಂದಿದ್ದರಂತೆ. ಆದರೆ, ದಾರಿ ಮಧ್ಯೆನೇ ಅವರಿಗೂ ಹೃದಯಘಾತವಾಗಿ ಕೊನೆಯುಸಿರೆಳೆದಿದ್ದರು ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ರಾಕೇಶ್ ಮಧ್ಯಮ ವರ್ಗದಿಂದ ಬಂದ ಹುಡುಗ. ತನ್ನ ಕಾಮಿಡಿ ಮೂಲಕವೇ ಮನೆ ಮಾತಾದ ಈ ಹುಡ್ಗನಿಗೆ ತನ್ನ ತಂದೆ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಕನಸಿತ್ತಂತೆ. ಆದ್ರೆ ಆ ಆಸೆ ಈಡೇರಲಿಲ್ಲ. ತಂದೆ ಮದುವೆಗಾಗಿ ಹುಡುಗನ್ನು ರಾಕೇಶ್ ಹುಡುಕುತ್ತಿದ್ದರಂತೆ. ನಾನು ಮದುವೆ ಆಗಲ್ಲ ಅಮ್ಮನನ್ನು ಚೆನ್ನಾಗಿ ನೋಡ್ಕೋಬೇಕು ಅಂತಿದ್ದ. ಆದ್ರೆ ಈಗ ಅಮ್ಮನ ಜೊತೆ ತಂಗಿನೂ ಬಿಟ್ಟು ಬಾರದೂರಿಗೆ ರಾಕೇಶ ಹೋಗಿದ್ದಾನೆ ಎಂದು ರಕ್ಷಿತಾ ಪ್ರೇಮ್ ರಾಕೇಶ್ ನೆನೆದು ಕಣ್ಣೀರಿಟ್ಟಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ರಾಕೇಶ್ ಅವರು ಮೆಹಂದಿ ಕಾರ್ಯಕ್ರಮ ಒಂದಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಹೃದಯಾಘಾತ ಆಗಿದೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ರಾಕೇಶ್ ನಿಧನ ಹೊಂದಿದ್ದಾರೆ. ರಾಕೇಶ್ ಪೈಲ್ವಾನ್, ಇದು ಎಂಥಾ ಲೋಕವಯ್ಯ ಎನ್ನುವ ಪ್ರಮುಖ ನಾಟಕಗಳಲ್ಲಿ ನಟಿಸಿದ್ದರು. ತುಳುವಿನಲ್ಲೂ ಪೆಟ್ಕಮ್ಮಿ ಹಾಗೂ ಪಮ್ಮನ್ನೆ ದಿ ಗ್ರೇಟ್ ಎನ್ನುವುದು ಸೇರಿದಂತೆ ಪ್ರಮುಖ ನಾಟಕಗಳನ್ನು ಮಾಡಿದ್ದಾರೆ. ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.