ಗೇಮ್ ಚೇಂಜರ್ ಬಳಿಕ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಭತ್ತಳಿಕೆಯಿಂದ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಪೆದ್ದಿ ಗ್ಲಿಂಪ್ಸ್ ಯೂಟ್ಯೂಬ್ ಅಂಗಳದಲ್ಲಿ ಧೂಳ್ ಎಬ್ಬಿಸುತ್ತಿದೆ. ರಾಮನವಮಿ ಪ್ರಯುಕ್ತ ನಿನ್ನೆ ಬಿಡುಗಡೆಯಾದ ಪೆದ್ದಿ ಝಲಕ್ ಹಳೆ ರೆಕಾರ್ಡ್ ಗಳೆಲ್ಲವನ್ನೂ ಉಡೀಸ್ ಮಾಡುತ್ತಿದೆ. ರಾಮ್ ಆಕ್ಟಿಂಗ್, ಬುಚ್ಚಿ ಬಾಬು ಟೇಕಿಂಗ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ. ಪೆದ್ದಿ ಫಸ್ಟ್ ಶಾರ್ಟ್ ಬಿಡುಗಡೆಯಾದ 24 ಗಂಟೆಯಲ್ಲಿ ಬರೋಬ್ಬರಿ 36.5 ಮಿಲಿಯನ್ಸ್ ಕಂಡು ರಾಕಿಭಾಯ್ ಟಾಕ್ಸಿಕ್ ದಾಖಲೆಯನ್ನು ಅಳಿಸಿ ಹಾಕಿದೆ.
ನ್ಯಾಷನಲ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಟಾಕ್ಸಿಕ್ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿತ್ತು. ಟಾಕ್ಸಿಕ್ ಬಿಡುಗಡೆಯಾದ 24 ಗಂಟೆಯಲ್ಲಿ ಬರೋಬ್ಬರಿ 36 ಮಿಲಿಯನ್ಸ್ ವೀವ್ಸ್ ಕಂಡಿತ್ತು. ಈ ಮೂಲಕ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಟೀಸರ್ ಎಂಬ ರೆಕಾರ್ಡ್ ಯಶ್ ಚಿತ್ರಕ್ಕೆ ಸೇರಿತ್ತು. ಆದರೆ ರಾಮ್ ಚರಣ್ ಪೆದ್ದಿ ತುಣುಕು 24 ಗಂಟೆಯಲ್ಲಿಯ 36.5 ಮಿಲಿಯನ್ಸ್ ವೀಕ್ಷಣೆ ಕಂಡಿದೆ. 50 ಸಾವಿರಕ್ಕೂ ಹೆಚ್ಚು ವೀವ್ಸ್ ಗಳಿಸುವ ಮೂಲಕ ಪೆದ್ದಿ ಟಾಕ್ಸಿಕ್ ರೆಕಾರ್ಡ್ ನ್ನು ಧೂಳಿಪಟ ಮಾಡಿದೆ.
ಜೂನಿಯರ್ ಎನ್ ಟಿಆರ್ ನಟನೆಯ ದೇವರ ಸಿನಿಮಾದ ಟೀಸರ್ 24 ಗಂಟೆಗಳಲ್ಲಿ 2 ಕೋಟಿ 80 ಲಕ್ಷಕ್ಕೂ ಅಧಿಕ ವೀವ್ಸ್ ಸಾಧಿಸಿತ್ತು. ಅಲ್ಲು ಅರ್ಜುನ್ ನಟನೆಯ ‘ಪುಷ್ಪ’-2 ಫಸ್ಟ್ ಟೀಸರ್ 2 ಕೋಟಿ 70 ಲಕ್ಷದ 11 ಸಾವಿರಕ್ಕೂ ಹೆಚ್ಚು ವೀವ್ಸ್ ಗಳಿಸಿತ್ತು. ಪೆದ್ದಿ ಸಿನಿಮಾಗೆ ಬುಚ್ಚಿಬಾಬು ಸನಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಇವರ ಎರಡನೇ ಪ್ರಯತ್ನ. ಈ ಹಿಂದೆ ಉಪ್ಪೇನ ಎಂಬ ಅದ್ಭುತ ಚಿತ್ರವನ್ನು ತೆರೆಗೆ ತಂದಿದ್ದರು. ಈಗ ಪೆದ್ದಿ ಮೂಲಕ ಸ್ಪೋರ್ಟ್ ಡ್ರಾಮಾ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ.