ಬೆಂಗಳೂರು: ಸಹ ಕಲಾವಿದೆ ಮೇಲೆ ಅತ್ಯಾಚಾರ, ಗರ್ಭಪಾತ, ಹಲ್ಲೆ ಆರೋಪದಡಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅರೆಸ್ಟ್ ಆಗಿದ್ದಾನೆ.
ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಮಡೆನೂರು ಮನುವನ್ನು ಹಾಸನ ಬಳಿಯ ಶಾಂತಿಗ್ರಾಮದ ಬಳಿ ಬಂಧಿಸಿದ್ದಾರೆ.
ಸಹ ಕಲಾವಿದೆ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಆರೋಪಿಸಿ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರು ದಾಖಲಿಸಿಕೊಂಡಿದ್ದ ಪೊಲೀಸರು, ತಲೆ ಮರೆಸಿಕೊಂಡಿದ್ದ ಮಡೆನೂರು ಮನುವನ್ನು ಹಾಸನದಲ್ಲಿ ಬಂಧಿಸಿದ್ದಾರೆ.
ಕುಲದಲ್ಲಿ ಕೀಳ್ಯಾವುದೊ ಚಿತ್ರದಲ್ಲಿ ಮಡೆನೂರು ಮನು ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರ ನಾಳೆ ಚಿತ್ರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರ ತೆರೆಗೆ ಬರುವ ಹೊತ್ತಲ್ಲೇ ನಟನ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಅತ್ಯಾಚಾರ ಕೇಸ್ ದಾಖಲಾಗಿದ್ದಂತೆ ನಟ ಮನು ತಲೆಮರೆಸಿಕೊಂಡಿದ್ದನೆ.
ಪೊಲೀಸರಿಂದ ಬಂಧನಕ್ಕೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿರುವ ಮಡೆನೂರು ಮನು, ಆ ಲೇಡಿ ಡಾನ್ ನನ್ನ ಸಾವನ್ನು ಬಯಸುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ತನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾಳೆ ಸಿನಿಮಾ ರಿಲೀಸ್ ಆಗುವಾಗ ದೂರು ಕೊಟ್ಟಿದ್ದಾರೆ. ಯಾರದ್ದೋ ಕುಮ್ಮಕ್ಕಿನಿಂದ ನನ್ನ ಮೇಲೆ ದೂರು ನೀಡಲಾಗಿದೆ ಎಂದು ಮನು ಆರೋಪಿಸಿದ್ದಾನೆ.
ಹಾಸನದ ಶಾಂತಿ ಗ್ರಾಮದ ಬಳಿ ಅರೆಸ್ಟ್ ಮಾಡಿರುವ ಅನ್ನಪೂರ್ಣೇಶ್ವರಿ ನಗರ ಪೊಲೀಸರು, ಮಡೆನೂರು ಮನುವನ್ನು ತೀವ್ರ ವಿಚಾರಣೆಗೊಳಪಡಿಸಿದ್ದು, ಇಂದು ಅಥವಾ ನಾಳೆ ಪೊಲೀಸರು ಕೋರ್ಟ್ ಗೆ ಹಾಜರುಪಡಿಸುವ ಸಾಧ್ಯತೆ ಇದೆ.