ಬೆಳಗಾವಿ:- ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆಸಿದ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಜರುಗಿದೆ.
ಘಟನೆ ಸಂಬಂಧ ಸೊಲ್ಲಾಪುರದ ವಿನಯ್ ಪಾಟೀಲ್ (22), ಪುಣೆಯ ಸರ್ವಜ್ಞ ಗಾಯಕವಾಡ (22), ಸಾಂಗ್ಲಿಯ ತನ್ಮಯ್ ಪೇಡ್ನೆಕರ್ ನನ್ನು ಬಂಧಿಸಲಾಗಿದೆ. ನ್ಯಾಯಾಲಯವು ಆರೋಪಿಗಳನ್ನ ಆರು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ.
ಸ್ನೇಹಿತರ ಜೊತೆಗೆ ರಾತ್ರಿ ಸಿನಿಮಾ ನೋಡಲು ಯುವತಿ ಹೋಗಿದ್ದಳು. ಸಿನಿಮಾ ಮುಗಿಸಿ ವಾಪಸ್ ಸ್ನೇಹಿತರ ಪ್ಲ್ಯಾಟ್ಗೆ ಹೋಗಿದ್ದಳು. ಯುವತಿಗೆ ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಬಳಿಕ ಅತ್ಯಾಚಾರ ನಡೆದಿದೆ.
ಬೆಳಗ್ಗೆ ಎದ್ದ ಬಳಿಕ ಅತ್ಯಾಚಾರ ಆಗಿದ್ದರ ಬಗ್ಗೆ ಬೆಳಕಿಗೆ ಬಂದಿದೆ. ಕೂಡಲೇ ಯುವತಿ ಕುಟುಂಬಸ್ಥರ ಗಮನಕ್ಕೆ ತಂದಿದ್ದಾಳೆ. ಸಾಂಗ್ಲಿಯ ವಿಶ್ರಾಂಬಾಗ್ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮೂವರನ್ನ ಬಂಧಿಸಿದ್ದಾರೆ.