ಬೆಂಗಳೂರು: ರ್ಯಾಪಿಡೊ ಚಾಲಕನಿಂದ ಯುವತಿ ಮೇಲೆ ಹಲ್ಲೆ ಮಾಡಿರುವ ಘಟನೆ ಜಯನಗರದ ಬಾಟ ಶೋರೂಂ ಬಳಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಶ್ರೇಯಾ ಅನ್ನೋ ಯುವತಿ ರ್ಯಾಪಿಡೊ ಬುಕ್ ಮಾಡಿದ್ರು. ಬೈಕ್ ಚಾಲಕ ಸುಹಾಸ್ ಮಹಿಳೆಯನ್ನ ಕೂರಿಸಿಕೊಂಡು ಡ್ರೈವ್ ಮಾಡುವಾಗ ಓವರ್ ಸ್ಪೀಡ್ನಲ್ಲಿ ಬೈಕ್ ಚಲಾಯಿಸಿದ್ದಾನೆ.
ಆಗ ಓವರ್ ಸ್ಪೀಡಾಗಿ ಹೋಗದಂತೆ ಶ್ರೇಯಾ ಎಚ್ಚರಿಕೆ ನೀಡಿದ್ದಾಳೆ. ಇದೇ ವಿಚಾರಕ್ಕೆ ಶ್ರೇಯಾ ಮತ್ತು ಸುಹಾಸ್ ನಡುವೆ ಕಿರಿಕ್ ನಡೆದಿದೆ.
ಈ ವೇಳೆ ಮಾತಿಗೆ ಮಾತು ಬೆಳೆದು ಸುಹಾಸ್, ಶ್ರೇಯಾಳ ಕಪಾಳಕ್ಕೆ ರಪ್ ಅಂತ ಬಾರಿಸಿದ್ದಾನೆ. ಒಂದೇ ಏಟಿಗೆ ಯುವತಿ ಕೆಳಗೆ ಬಿದ್ದಿದ್ದು, ಸ್ಥಳೀಯರೊಬ್ಬರು ಈ ಹಲ್ಲೆಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಬಳಿಕ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಜಯನಗರ ಠಾಣೆಯಲ್ಲಿ ಚಾಲಕನ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.