ರಶ್ಮಿಕಾ ಮಂದಣ್ಣ ನಿನ್ನೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದೂರದ ಓಮನ್ ದೇಶದಲ್ಲಿ ತಮ್ಮ 29ನೇ ಜನ್ಮೋತ್ಸವವನ್ನು ಸೆಲೆಬ್ರೆಟ್ ಮಾಡ್ಕೊಂಡಿದ್ದಾರೆ. ಸಿಕಂದರ್ ಸಿನಿಮಾ ಸೋಲಿಗೆ ತಲೆಕೆಡಿಸಿಕೊಳ್ಳದೇ ಧಾಮ್ ಧೂಮಾಗಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಬೀಚ್ ನಲ್ಲಿ ಕುಳಿತು ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋ ನೋಡಿದ ಫ್ಯಾನ್ಸ್ ಖುಷಿಯಾಗಿದ್ದಾರೆ. ಅಷ್ಟಕ್ಕೂ ಈ ಫೋಟೋಗಳನ್ನು ಸೆರೆಹಿಡಿದವರು ವಿಜಯ್ ದೇವರಕೊಂಡನಾ ಎಂದು ಕೇಳುತ್ತಿದ್ದಾರೆ.
ರಶ್ಮಿಕಾ ವಿಜಯ್ ನಡುವೆ ಏನೋ ಇದೆ ಅನ್ನೋದು ಸಿನಿರಸಿಕರು ಕುತೂಹಲ. ಕದ್ದು ಮುಚ್ಚಿ ಟ್ರಿಪ್, ಡೇಟಿಂಗ್, ಔಟಿಂಗ್ ಹೋಗುವ ಜೋಡಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು ಇದೇ. ಹೀಗಾಗಿ ರಶ್ಮಿಕಾ ವಿಜಯ್ ಪ್ರೀತಿಯಲ್ಲಿ ಬಿದಿದ್ದಾರೆ ಎಂಬ ಗುಲ್ಲಿದೆ. ಸದ್ಯ ಓಮನ್ ನಲ್ಲಿರುವ ರಶ್ಮಿಕಾಗೆ ವಿಜಯ್ ಸಾಥ್ ಕೊಟ್ಟಿದ್ದಾರೆ ಅನ್ನೋ ಮಾತಿದೆ.
ಕೆಲ ದಿನಗಳ ಹಿಂದಷ್ಟೇ ಮುಂಬೈ ಹೋಟೆಲ್ ವೊಂದರಲ್ಲಿ ಲಾಂಚ್ ಡೇಟಿಂಗ್ ನಲ್ಲಿ ಈ ಜೋಡಿ ತಗ್ಲಾಕೊಂಡಿದ್ದರು. ಆದ್ರೂ ನಮ್ಮ ನಡುವೆ ಏನೂ ಇಲ್ಲ ಅಂತಾನೇ ಅವರು ಪ್ಯಾಚಪ್ ಮಾಡಿಕೊಳ್ಳುತ್ತಾರೆ. ಕಿಂಗ್ ಡಮ್ ಚಿತ್ರದಲ್ಲಿ ವಿಜಯ್ ಬ್ಯಯಸಿಯಾಗಿದ್ದು, ಅತ್ತ ರಶ್ಮಿಕಾ ಮಂದಣ್ಣ ಗರ್ಲ್ ಫ್ರೆಂಡ್, ಕುಬೇರ ಸೇರಿದಂತೆ ಒಂದಷ್ಟು ಚಿತ್ರಗಳ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.