ಮಂಕು ಬುದ್ದಿಯ ಮಂದಣ್ಣನಿಗೆ ಏನ್ ಹೇಳೋದೋ..ಬಿಡೋದೋ? ಕಂಟ್ರೋವರ್ಸಿ ಅಂದ್ರೆ ರಶ್ಮಿಕಾ..ರಶ್ಮಿಕಾ ಅಂದ್ರೆ ಕಂಟ್ರೋವರ್ಸಿ ಅನ್ನೋ ಹಾಗೇ ಆಗಿದೆ. ವಾರಕ್ಕೊಂದು ಇಲ್ಲ ತಿಂಗಳಿಗೂ ವಿವಾದಗಳು ಈ ಕಿರಿಕ್ ಹುಡ್ಗಿ ಅಂಟಿಕೊಳ್ಳೋದು ಕಾಮನ್ ಆಗ್ಬಿಟ್ಟಿದೆ. ಇದೀಗ ಈ ನ್ಯಾಷನಲ್ ಕ್ರಶ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾಳೆ. ಸಂದರ್ಶನವೊಂದ್ರಲ್ಲಿ ಬುದ್ದಿ ಇಲ್ಲದಂತೆ ಮಂದಣ್ಣ ಮಾತನಾಡಿರುವುದು ವಿಡಿಯೋ ಕನ್ನಡಿಗರ ಕಣ್ಣು ಕೆಂಪು ಮಾಡುವಂತೆ ಮಾಡಿದೆ. ಕೊಡಗಿನಿಂದ ಸಿನಿಮಾರಂಗಕ್ಕೆ ಮೊದಲು ಬಂದವಳು ನಾನೇ ಹೆಮ್ಮೆಯಿಂದ ಈ ಮಂದಣ್ಣ ಹೇಳಿರೋದು ಚರ್ಚೆಗೆ ಗ್ರಾಸವಾಗಿದೆ. ಅರೇ! ಈ ನ್ಯಾಷನಲ್ ಕ್ರಶ್ ಗೆ ಓಂ ಸಿನಿಮಾ ಗೊತ್ತಿಲ್ವಾ? ಓಂ ಬ್ಯೂಟಿ ಪ್ರೇಮಾ ಗೊತ್ತಿಲ್ವಾ? ಚಿಟ್ಟಿ ಅಂತಾ ಕರೆಸಿಕೊಳ್ಳೋ ಹರ್ಷಿಕಾ ಬಗ್ಗೆ ಮಾಹಿತಿ ಇಲ್ವಾ? ನಿಧಿ, ಡೈಸಿ ಇವರೆಲ್ಲಾ ಯಾರು ಅನ್ನೋ ಜ್ಞಾನ ನಿಂಗೆ ಇಲ್ವನ್ನಮ್ಮ ಅಂತಾ ನಿಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂರು ಹಿಟ್ ಸಿನಿಮಾ ಕೊಟ್ ತಕ್ಷಣನೇ ನೀನೇ ಸೂಪರ್ ಹೀರೋಯಿನ್..ಸಿನಿಮಾ ಫಸ್ಟ್ ಅನ್ನೋದನ್ನು ನಿನ್ನ ಮಂಡೆಯಿಂದ ಕಿತ್ತಾಕ್ಕೂ..ನಿನ್ನ್ ಹುಟ್ಟೋ ಮೊದ್ಲೇ ಬಣ್ಣ ಹಚ್ಚಿ ಕ್ಯಾಮೆರಾ ಮುಂದೆ ಬಂದವರು ಪ್ರೇಮಾ. ಇವರೆಲ್ಲಾ ಕೊಡಗಿನ ನಾಯಕಿಯರೇ. ಕೊಡವ ಕಮ್ಯೂನಿಟಿಯಿಂದ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದ ಮೊದಲ ಮಹಿಳೆ ನೀನು ಅಲ್ಲಮ್ಮ ರಶ್ಮಿಕಾ ಮಂದಣ್ಣನಿಗೆ ಕನ್ನಡಿಗರು ಸಿನಿಮಾ ಇಂಡಸ್ಟ್ರೀಯ ಪಾಠ ಹೇಳ್ತಿದ್ದಾರೆ.
ಮಂಕು ಬುದ್ದಿ ಮಂದಣ್ಣ ಮತ್ತೊಂದು ಎಡವಟ್ಟು..ʼಓಂʼ ಸಿನಿಮಾ ನೋಡಿಲ್ವೆನಮ್ಮ ನ್ಯಾಷನಲ್ ಕ್ರಶ್? Video!
By Author AIN