ರಶ್ಮಿಕಾ ಮಂದಣ್ಣ ಹ್ಯಾಟ್ರಿಕ್ ಗೆಲುವು ಬಳಿಕ ಸಿಕಂದರ್ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇತ್ತು. ಪುಷ್ಪ, ಅನಿಮಲ್ ಹಾಗೂ ಛಾವಾ ರೀತಿ ಸಿಕಂದರ್ ಸೂಪರ್ ಡೂಪರ್ ಹಿಟ್ ಆಗುತ್ತೇ ಎಂಬ ಭರವಸೆ ಸುಳ್ಳಾಗಿದೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಸಿಕಂದರ್ ಪ್ರೇಕ್ಷಕರಿಂದ ಸೈ ಎನಿಸಿಕೊಳ್ಳುವಲ್ಲಿ ಸೋತಿದೆ. ಇದು ರಶ್ಮಿಕಾ ಕರಿಯರ್ ಗೆ ದೊಡ್ಡ ಪೆಟ್ಟು ಬಿದ್ದಂತಾಗಿದೆ ಎಂಬ ಮಾತು ಕೇಳಿ ಬರ್ತಿದೆ. ಸಿಕಂದರ್ ಸೋಲಿನ ನಡುವೆ ಶ್ರೀವಲ್ಲಿ ಅನಿಮಲ್ ಡೈರೆಕ್ಟರ್ ಶಾಕ್ ಕೊಟ್ಟಿದ್ದಾರೆ.
ಪ್ರಭಾಸ್ ಚಿತ್ರದಿಂದ ರಶ್ಮಿಕಾ ಕಿಕ್ ಔಟ್?
ಸಿಕಂದರ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಹೀನಾಯ ಸೋತಿದೆ. ಹೀಗಾಗಿ ರಶ್ಮಿಕಾ ಕೈಯಲ್ಲಿದ್ದ ಪ್ರಾಜೆಕ್ಟ್ ವೊಂದರು ಜಾರಿ ಹೋಗಿದೆ. ಅನಿಮಲ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರಭಾಸ್ ಗೆ ಸ್ಪಿರಿಟ್ ಎಂಬ ಚಿತ್ರ ಮಾಡುತ್ತಿದ್ದಾರೆ. ಈ ಸಿನಿಮಾಗೆ ರಶ್ಮಿಕಾ ಮಂದಣ್ಣರನ್ನು ನಾಯಕಿಯಾಗಿ ಸಂದೀಪ್ ಆಯ್ಕೆ ಮಾಡಿದ್ದಾರಂತೆ. ಆದರೀಗ ಸಿಕಂದರ್ ಸೋಲಿನ ಬಳಿಕ ರಶ್ಮಿಕಾ ಕೈಬಿಟ್ಟು ಚಿತ್ರತಂಡ ಬೇರೆ ನಾಯಕಿಯರ ಹುಡುಕಾಟದಲ್ಲಿದೆ ಎನ್ನಲಾಗುತ್ತಿದೆ.
ಛಾವಾ, ಪುಷ್ಪ ಹಾಗೂ ಅನಿಮಲ್ ಹಿಟ್ ಬಳಿಕ ರಶ್ಮಿಕಾ ಮಂದಣ್ಣ ಕರಿಯರ್ ಪೀಕ್ ನಲ್ಲಿತ್ತು. ಹೀಗಾಗಿ ಪ್ರತಿ ಚಿತ್ರಕ್ಕೆ 4 ರಿಂದ 5 ಕೋಟಿ ಸಂಭಾವನೆಯನ್ನು ಶ್ರೀವಲ್ಲಿ ಪಡೆಯುತ್ತಿದ್ದಳಂತೆ. ಸ್ಪಿರಿಟ್ ಚಿತ್ರಕ್ಕಾಗಿ ಚಿತ್ರತಂಡ 4 ಕೋಟಿ ಸಂಭಾವನೆಗೆ ಒಪ್ಪಿಕೊಂಡಿತ್ತು ಎನ್ನಲಾಗುತ್ತಿದೆ. ಆದರೀಗ ಚಿತ್ರವೂ ಇಲ್ಲ ಹಣವೂ ಇಲ್ಲ ಅನ್ನೋ ಸ್ಥಿತಿಯಲ್ಲಿದೆಯಂತೆ ರಶ್ಮಿಕಾ ಮಂದಣ್ಣ ಪರಿಸ್ಥಿತಿ. ಇತ್ತೀಚೆಗೆ ರಶ್ಮಿಕಾ ಓಮನ್ ನಲ್ಲಿ ಅದ್ಧೂರಿಯಾಗಿ ಬರ್ತಡೇ ಸೆಲೆಬ್ರೆಟ್ ಮಾಡಿಕೊಂಡಿದ್ದರು.