ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್. ಎಷ್ಟೋ ನಟ-ನಟಿಯರಿಗೆ ಹತ್ತು ವರ್ಷಗಳ ಕಾಲ ಸೈಕಲ್ ಹೊಡೆದ್ರೂ ಸಿಗದ ಸಕ್ಸಸ್ ಶಾರ್ಟ್ ಟೈಮ್ನಲ್ಲಿಯೇ ರಶ್ಮಿಕಾ ಭತ್ತಳಿಕೆ ಸೇರಿಕೊಂಡಿದೆ. ತೆಲುಗಿ ಹಾರಿದ್ಮೇಲೆ ಕನ್ನಡಕ್ಕೆ ಗುಡ್ ಬೈ ಹೇಳಿರುವ ಪುಷ್ಪನ ಶ್ರೀವಲ್ಲಿ ಈಗ ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಕ್ಸಸ್ ಸಿಕ್ಸರ್ ಬಾರಿಸ್ತಿದ್ದ ರಶ್ಮಿಕಾಗೆ ಅದ್ಯಾಕೋ ಸಿಕಂದರ್ ಸೋಲಿನ ರುಚಿ ಉಣಿಸಿದೆ. ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಸಾಥ್ ಕೊಟ್ಟಿದ್ದ ಈ ಬೆಡಗಿ ಈಗ ವಯಸ್ಸಿನ ಬಗ್ಗೆ ಮುಕ್ತಾವಾಗಿ ಮಾತನಾಡಿದ್ದಾರೆ.
ರಶ್ಮಿಕಾ ಮಂದಣ್ಣ ಹಾಗೂ ಸಲ್ಮಾನ್ ಖಾನ್ ನಟನೆಯ ಸಿಕಂದರ್ ಸಿನಿಮಾ ಈದ್ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿದೆ. ಆದರೆ ನಿರೀಕ್ಷೆಗೆ ತಕ್ಕಂತೆ ಈ ಚಿತ್ರ ಗಳಿಕೆ ಕಂಡಿಲ್ಲ. ಪ್ರೇಕ್ಷಕರಿಗೂ ಕಥೆ ಇಷ್ಟವಾಗಿಲ್ಲ. ಒಂದ್ಕಡೆ ಸಿಕಂದರ್ ಸೋಲನ್ನು ಲೆಕ್ಕಕ್ಕೆ ಹಾಕಿಕೊಳ್ಳದ ರಶ್ಮಿಕಾ ಮಂದಣ್ಣ ತಮ್ಮ ಹುಟ್ಟುಹಬ್ಬ ಆಚರಣೆಗೆ ಸಜ್ಜಾಗುತ್ತಿದ್ದಾಳೆ. ಇದೇ ತಿಂಗಳ 5ರಂದು ಶ್ರೀವಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾಳೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ರಶ್ಮಿಕಾ ಪೋಸ್ಟ್ ವೊಂದನ್ನು ಹಾಕಿದ್ದಾರೆ.
ನನ್ನ ಹುಟ್ಟುಹಬ್ಬದ ತಿಂಗಳು ಆಯ್ತು, ನನಗೆ ತುಂಬಾ ಸಂತೋಷ ಆಯ್ತು.. ನೀವು ವಯಸ್ಸಾದಂತೆಲ್ಲಾ ನಿಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಆಸಕ್ತಿ ಕಡಿಮೆಯಾಗುತ್ತಿದೆ ಎಂದು ನಾನು ಯಾವಾಗಲೋ ಕೇಳಿದ್ದೇನೆ.. ಆದರೆ ನನ್ನ ವಿಷಯದಲ್ಲಿ ಅದು ಹಾಗಲ್ಲ.. ವಯಸ್ಸಾದಂತೆಲ್ಲಾ ನಾನು ನನ್ನ ಹುಟ್ಟುಹಬ್ಬವನ್ನು ಆಚರಿಸಲು ಹೆಚ್ಚು ಉತ್ಸುಕಳಾಗಿತ್ತಿದ್ದೇನೆ. ನಾನು ಈಗಾಗಲೇ 29 ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂದು ನಂಬಲು ಸಾಧ್ಯವಾಗುತ್ತಿಲ್ಲ.. ನಾನು ಅದನ್ನು ಸಂತೋಷದಿಂದ ಆಚರಿಸುತ್ತಿದ್ದೇನೆ ಎಂದು ಕ್ಯೂಟ್ ಫೋಟೋ ಮೂಲಕ ಪೋಸ್ಟ್ ಮಾಡಿದ್ದಾರೆ.
ಧನುಷ್ ಜೊತೆ ಕುಬೇರ, ಗರ್ಲ್ ಫ್ರೆಂಡ್ ಎಂಬ ಮಹಿಳಾ ಪ್ರಧಾನ ಚಿತ್ರ ಹಾಗೂ ಆಯುಷ್ಮಾನ್ ಖುರಾನ್ ಜೊತೆ ಥಾಮ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರಗಳು ಬಿಡುಗಡೆಯಾಗಬೇಕಿದೆ. ಇನ್ನೂ ಹೊಸ ಸಿನಿಮಾಗಳ ಕಥೆ ಕೇಳೋದ್ರಲ್ಲಿ ಬ್ಯುಸಿಯಾಗಿದ್ದು, ಒಂದು ವೇಳೆ ಪುಷ್ಪ 3 ಸಿನಿಮಾ ಸೆಟ್ಟೇರಿದ್ರೆ ಆ ಚಿತ್ರದಲ್ಲಿ ರಶ್ಮಿಕಾ ಇರ್ತಾರೋ ಇಲ್ವೋ ಗೊತ್ತಿಲ್ಲ.