ತಮಿಳಿನ ಖ್ಯಾತ ನಟ ಜಯಂ ರವಿ ಹಾಗೂ ಪತ್ನಿ ಆರತಿ ಡಿವೋರ್ಸ್ ಮ್ಯಾಟರ್ ಈಗ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. 15 ವರ್ಷದ ಸಂಸಾರ ಅಂತ್ಯಗೊಳಿಸೋದಿಕ್ಕೆ ಈ ಜೋಡಿ ಮುಂದಾಗಿದೆ. ಜಯಂ ರವಿ ಹಾಗೂ ಆರತಿ ಡಿವೋರ್ಸ್ ಕಲಹವೀಗ ಕೋರ್ಟ್ ಅಂಗಳದಲ್ಲಿದೆ. ರವಿ ಮೋಹನ್ ಮತ್ತು ಆರತಿ ತಮ್ಮ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಚೆನ್ನೈ ಕುಟುಂಬ ಕಲ್ಯಾಣ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಕೋರ್ಟ್ ವಿಚಾರಣೆಯನ್ನು ಜೂನ್ 12, 2025 ಕ್ಕೆ ಮುಂದೂಡಲಾಗಿದೆ.
ರವಿ ಮೋಹನ್ ಅವರು ಈ ಹಿಂದೆ ಇದೇ ಕುಟುಂಬ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವಿಷಯವನ್ನು ಮಧ್ಯಸ್ಥಿಕೆ ಮತ್ತು ಸಮನ್ವಯ ಕೇಂದ್ರಕ್ಕೆ ಉಲ್ಲೇಖಿಸಲಾಗಿತ್ತು. ಅಲ್ಲಿ ನ್ಯಾಯಾಧೀಶರು ದಂಪತಿಗಳು ಶಾಂತಿಯುತ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದರು. ಇದರ ನಂತರ, ಇಬ್ಬರೂ ಮೂರು ಮಧ್ಯಸ್ಥಿಕೆ ಅವಧಿಗಳಲ್ಲಿ ಭಾಗವಹಿಸಿದರು. ಎಲ್ಲಾ ಮಾತುಕತೆಗಳು ಶಾಂತ ಮತ್ತು ಸಹಕಾರಿ ರೀತಿಯಲ್ಲಿ ನಡೆದವು. ಮಾಸಿಕ 40 ಲಕ್ಷ ರೂ. ಜೀವನಾಂಶ ನೀಡುವಂತೆ ಕೋರಿ ಜಯಂ ರವಿ ಪತ್ನಿ ಆರತಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗುತ್ತಿದೆ.
ಗಾಯಕಿ ಕೆನಿಷಾ ಜೊತೆ ಜಯಂ ರವಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅವ್ರೇ ನನ್ನ ಮನದರಸಿ ಎಂದು ಹೇಳಿದ್ದಾರೆ. ಇತ್ತೀಚೆಗೆ ಈ ಜೋಡಿ ಮದುವೆ ಕಾರ್ಯಕ್ರಮವೊಂದರಲ್ಲಿ ಕೈ ಕೈ ಹಿಡಿದು ಓಡಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ನಂತರ ಈ ವಿಷಯದ ಬಗ್ಗೆ ಸ್ವತಃ ಆರತಿ ಪತ್ರ ಬರೆದು ಕೋಪ ಹೊರ ಹಾಕಿದ್ದರು. ಆರತಿ ಪತ್ರಕ್ಕೆ ಜಯಂ ರವಿ ಕೌಂಟರ್ ಕೊಟ್ಟು ಪತ್ರ ಬರೆದಿದ್ದರು.
View this post on Instagram
View this post on Instagram