ಮಲ್ಲನ್ಪುರ ಕ್ರಿಕೆಟ್ ಅಂಗಳದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿದೆ. ಅಗ್ರ ಕ್ರಮಾಂಕದ ಬ್ಯಾಟರ್ಗಳ ಕಳಪೆ ಪ್ರದರ್ಶನದಿಂದ ಪಂಜಾಬ್ ಕಿಂಗ್ಸ್ವು ಕ್ವಾಲಿಫೈಯರ್-1ನಲ್ಲಿ 14.1 ಓವರ್ಗಳಲ್ಲೇ 101 ರನ್ಗಳಿಗೆ ಆಲೌಟ್ ಆಗಿದೆ.
ಎಲೆಕ್ಟ್ರಿಕ್ ಬಸ್ ರಿಪೇರಿ ಮಾಡುವಾಗ ಬೆಂಕಿ ಅವಘಡ: ಮೆಕ್ಯಾನಿಕ್ ಸ್ಥಿತಿ ಗಂಭೀರ!
ಈ ಮೂಲಕ ಎದುರಾಳಿ ಆರ್ಸಿಬಿಗೆ 102 ರನ್ಗಳ ಗುರಿ ನೀಡಿದೆ. ಟಾಸ್ ಗೆದ್ದ ಆರ್ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡು ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಂಜಾಬ್ಗೆ ಬಿಟ್ಟುಕೊಟ್ಟಿತು. ಉತ್ತಮ ರನ್ ಪೇರಿಸುವ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಪಂಜಾಬ್ ಕಿಂಗ್ಸ್ಗೆ ಆರಂಭದಲ್ಲೇ ಮರ್ಮಾಘಾತವಾಯಿತು. 1.2 ಓವರ್ಗಳಲ್ಲಿ 9 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಬಳಿಕ ಪೆವಿಲಿಯನ್ ಪರೇಡ್ ನಡೆಸಲು ಶುರು ಮಾಡಿತು. ಪವರ್ ಪ್ಲೇನಲ್ಲಿ ಒಂದೆಡೆ ರನ್ ಹರಿಯುತ್ತಿದ್ದರೆ ಮತ್ತೊಂದೆಡೆ ಪ್ರಮುಖ ವಿಕೆಟ್ಗಳು ತರಗೆಲೆಗಳಂತೆ ಉದುರುತ್ತಿದ್ದವು. ಇದರಿಂದ ಪವರ್ ಪ್ಲೇನಲ್ಲಿ 48 ರನ್ ಗಳಿಸುವ ಹೊತ್ತಿಗೆ ಪಂಜಾಬ್ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಮೊದಲ ಓವರ್ನಲ್ಲಿ ನಿರಾಸೆಗೊಂಡಿದ್ದ ಆರ್ಸಿಬಿ ಬೌಲಿಂಗ್ ಪಡೆ 2ನೇ ಓವರ್ನಿಂದಲೇ ಪಂಜಾಬ್ ಬ್ಯಾಟರ್ಗಳ ಮೇಲುಗೈ ಸಾಧಿಸಿತು. ಈ ಆವೃತ್ತಿಯಲ್ಲಿ ಮೆರೆದಾಡಿದ ಅಗ್ರ ಕ್ರಮಾಂಕದ ಬ್ಯಾಟರ್ಗಳಿಗೆ ಪೆವಿಲಿಯನ್ ಹಾದಿ ತೋರುವಲ್ಲಿ ಯಶಸ್ವಿಯಾದರು.