ಐಪಿಎಲ್ 2025ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡುತ್ತಿದೆ. ಕೋಲ್ಕತ್ತಾ ಮತ್ತು ಚೆನ್ನೈ ವಿರುದ್ಧ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಆರ್ ಸಿಬಿ ಅಭಿಮಾನಿಗಳ ಬಳಗ ಚಿಕ್ಕದೇನಲ್ಲ. ದೇಶಾದ್ಯಂತ ಆರ್ ಸಿಬಿ ಅಭಿಮಾನಿಗಳನ್ನು ಹೊಂದಿದೆ.
ಹಾವು ಕಚ್ಚಿದರೆ ಸುಮ್ಮನೆ ಕೂರಬೇಡಿ: ತಕ್ಷಣ ಇದನ್ನು ಸೇವಿಸಿದ್ರೆ ವಿಷ ದೇಹಕ್ಕೆ ಸೇರಲ್ಲ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಚೆನ್ನೈನಲ್ಲಿ ಸಿಎಸ್ಕೆ ವಿರುದ್ಧ 50 ರನ್ಗಳ ಅಮೋಘ ಗೆಲುವು ಸಾಧಿಸಿದೆ. ಸಿಎಸ್ಕೆ ವಿರುದ್ಧದ ಗೆಲುವಿನ ಬಳಿಕ ಬೆಂಗಳೂರಿಗೆ ಆಗಮಿಸಿದ್ದು ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ.
IPL 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠವಾಗಿ ಕಾಣುತ್ತಿದ್ದು, ಆಡಿದ ಎರಡು ಪಂದ್ಯದಲ್ಲೂ ಭರ್ಜರಿ ಗೆಲುವು ಕಂಡಿದೆ.
ಮೊದಲಿಗೆ ಕೋಲ್ಕತ್ತಾ, ಬಳಿಕ ಚೆನ್ನೈ ಮಣಿಸಿರುವ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್ 2 ಬುಧವಾರದಂದು ರಾತ್ರಿ 7.30 ಕ್ಕೆ ಶುರುವಾಗಲಿದೆ.
ಇನ್ನೂ ಹೋಮ್ಗ್ರೌಂಡ್ ಅನ್ನೋದು ಪ್ರತಿ ತಂಡಕ್ಕೂ ಅಡ್ವಾಂಟೇಜ್ ಆಗಿರುತ್ತೆ. ಯಾವಾಗ್ಲೂ ತವರಿನ ತಂಡವೇ ಗೆಲ್ಲೋ ಫೇವರಿಟ್ ಅನಿಸಿರುತ್ತೆ. ಆರ್ಸಿಬಿ ವಿಚಾರದಲ್ಲಿ ಇದು ಉಲ್ಟಾ.. ಹೋಮ್ಗ್ರೌಂಡ್ನಲ್ಲಿ ಆರ್ಸಿಬಿ, ಹೆಚ್ಚು ಪಂದ್ಯಗಳನ್ನು ಸೋತಿದೆ.
ಚಿನ್ನಸ್ವಾಮಿಯಲ್ಲಿ ಆರ್ಸಿಬಿ, ಇದುವರೆಗೆ 91 ಪಂದ್ಯಗಳನ್ನಾಡಿದೆ. ಈ ಪೈಕಿ 43 ಪಂದ್ಯಗಳಲ್ಲಿ ಗೆದ್ದಿರುವ ಆರ್ಸಿಬಿ, 48.96ರ ವಿನ್ನಿಂಗ್ ಪರ್ಸೇಂಟೇಜ್ ಹೊಂದಿದೆ. ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ 7 ಪಂದ್ಯಗಳನ್ನಾಡಲಿರುವ ಆರ್ಸಿಬಿ, ಕನಿಷ್ಟ ಅಂದ್ರೂ 5 ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಗೆದ್ರೆ ಪ್ಲೇ ಆಫ್ ಎಂಟ್ರಿ ಸುಲಭವಾಗಲಿದೆ. ಚಿನ್ನಸ್ವಾಮಿಯ ಈ ಹಿಂದಿನ ದಾಖಲೆಗಳು ಆರ್ಸಿಬಿಗೆ ವಿರುದ್ಧವಾಗಿವೆ. ಹಳೆಯ ದಾಖಲೆಯನ್ನ ಸುಳ್ಳಾಗಿಸಿ ತಂಡವನ್ನ ಗೆಲುವಿನ ದಡ ಸೇರಿಸೋ ಜವಾಬ್ದಾರಿ ಇದೀಗ ಕ್ಯಾಪ್ಟನ್ ರಜತ್ ಪಟಿದಾರ್ ಮುಂದಿದೆ.
ಚಿನ್ನಸ್ವಾಮಿ ವಿರಾಟ್ ಕೊಹ್ಲಿಯ ಫೇವರಿಟ್ ಗ್ರೌಂಡ್. ಈ ಅಂಗಳದಲ್ಲಿ ಕಿಂಗ್ ಕೊಹ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಈ ಸೀಸನ್ನಲ್ಲೂ ತನ್ನ ಫೇವರಿಟ್ ಗ್ರೌಂಡ್ನಲ್ಲಿ ವಿರಾಟ್ ವೀರಾವೇಶ ಮುಂದುವರಿಸಬೇಕಿದೆ. ತವರಿನ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯಿಟ್ಟಿದ್ದಾರೆ. ಆ ನಿರೀಕ್ಷೆಯನ್ನ ನಿಜವಾಗಿಸಬೇಕಿದೆ.
ಒಟ್ಟಾರೆ ಅಂತಿಮ ರಿಸಲ್ಟ್ ಬುಧವಾರ ರಾತ್ರಿ 11pm ಒಳಗಾಗಿ ಗೊತ್ತಾಗಲಿದೆ. RCB ಅಬಿಮಾನಿಗಳು ಈ ಪಂದ್ಯಕ್ಕಾಗಿ ಕಾತುರರಾಗಿದ್ದಾರೆ.