ಬೆಂಗಳೂರು:- ಶುಕ್ರವಾರ ನಡೆದ IPL ಪಂದ್ಯದಲ್ಲಿ ಚೆನ್ನೈ ವಿರುದ್ಧ ಗೆದ್ದು ಬೀಗಿದ RCB ತಂಡವು, ಸಿಲಿಕಾನ್ ಸಿಟಿ ಬೆಂಗಳೂರಿಗೆ ರಾಯಲ್ ಆಗಿ ಎಂಟ್ರಿ ಕೊಟ್ಟಿದೆ.
ಚೆನೈ ವಿರುದ್ಧ ನೆನ್ನೆ ಪಂದ್ಯ ಗೆದ್ದು ಬೀಗಿದ್ದ ಆರ್ ಸಿ ಬಿ ತಂಡ ಇಂದು ಬೆಂಗಳೂರಿಗೆ ರಾಯಲ್ ಎಂಟ್ರಿ ಕೊಟ್ಟಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಬೆಂಗಳೂರಿನ ಕಡೆಗೆ ಆರ್ ಸಿ ಬಿ ಪ್ಲೇಯರ್ಸ್ ಮುಖ ಮಾಡಿದ್ದಾರೆ. 17 ವರ್ಷ ಗಳ ನಂತರ ಚೆನೈನ ಎಂ,ಎ ಚಿದಂಬರಂ ಸ್ಟೇಡಿಯಂ ನಲ್ಲಿ RCB ತಂಡ ಇತಿಹಾಸ ಸೃಷ್ಟಿ ಮಾಡಿತ್ತು. ಏರ್ಪೋರ್ಟ್ ಗೆ ಪ್ಲೇಯರ್ಸ್ ಬಂದಿಳಿಯುತ್ತಿದಂತೆ ಅಭಿಮಾನಿಗಳು ಸಂಭ್ರಮ ಪಟ್ಟಿದ್ದಾರೆ. ಅಭಿಮಾನಿಗಳ ಕಡೆ ಕೈ ಬೀಸಿ RCB ಪ್ಲೇಯರ್ಸ್ ಚಿಯರ್ಸ್ ಹೇಳಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಏಪ್ರಿಲ್ 2 ರಂದು ಆರ್ ಸಿ ಬಿ ಹಾಗೂ ಗುಜರಾತ್ ಸೇಣಸಾಟ ನಡೆಯಲಿದೆ.