ಬೆಂಗಳೂರು:- ಪಾಕಿಸ್ತಾನ ಹಾಗೂ ಭಾರತ ವಿರುದ್ಧದ ಯುದ್ಧದ ಸಂಘರ್ಷದಲ್ಲಿ ಸ್ಥಗಿತಗೊಂಡಿದ್ದ ಐಪಿಎಲ್ ಮತ್ತೆ ಪುನರಾರಂಭ ಆಗುತ್ತಿದೆ.
ನಿಮ್ಮ ಮನೆಯಲ್ಲೂ ಜಿರಳೆ ಕಾಟ ಜಾಸ್ತಿ ಆಗಿದ್ಯಾ? ಹಾಗಿದ್ರೆ ಈ ಸಿಂಪಲ್ ಮನೆಮದ್ದು ಬಳಸಿ!
ಆರ್ಸಿಬಿ ಹಾಗೂ ಕೆಕೆಆರ್ ನಡುವೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸಂಜೆ 7:30ಕ್ಕೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಭಾರತ ಹಾಗೂ ಪಾಕಿಸ್ತಾನದ ನಡುವಿನ ಘರ್ಷಣೆಯ ಬಳಿಕ ಐಪಿಎಲ್ ಪುನರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ನಡೆಯದಂತೆ ಚಿನ್ನಸ್ವಾಮಿ ಮೈದಾನದ ಸುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕೆಕೆಆರ್ ಮತ್ತು ಆರ್ಸಿಬಿ ನಡುವಿನ ಈ ಮಹತ್ವದ ಐಪಿಎಲ್ ಪಂದ್ಯಕ್ಕೆ 1,600 ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗುತ್ತಿದೆ. ಇದರಲ್ಲಿ ನಾಲ್ವರು ಡಿಸಿಪಿ ಅಧಿಕಾರಿಗಳು, 12 ಎಸಿಪಿ, 28 ಇನ್ಸ್ಪೆಕ್ಟರ್, 80 ಸಬ್ ಇನ್ಸ್ಪೆಕ್ಟರ್ ಸೇರಿ 1600 ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಇಷ್ಟೇ ಅಲ್ಲದೇ ಕ್ಯೂಆರ್ಟಿ, ವಾಟರ್ ಜೆಟ್, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ನಿಯೋಜನೆ ಮಾಡಲಾಗಿರುತ್ತದೆ. 4 ಕೆಎಸ್ಆರ್ಪಿ ತುಕಡಿ, ಹೋಂಗಾರ್ಡ್ಸ್ ಕೂಡ ಭದ್ರತೆ ನೀಡಲಿದ್ದಾರೆ.