ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ತಂಡ ಮುಖಾಮುಖಿಯಾಗಿವೆ. ಆದರೆ ತವರು ಮೈದಾನದಲ್ಲೇ RCB ಬ್ಯಾಟರ್ಸ್ ತತ್ತರಿಸಿದ್ದು, ಗುಜರಾತ್ ತಂಡದ ಆಟಗಾರ ಮಾಜಿ RCB ಪ್ಲೇಯರ್ ಸಿರಾಜ್ ಅವರ ಬೊಂಬಾಟ್ ಬೌಲಿಂಗ್ ಗೆ RCB ಬ್ಯಾಟರ್ಸ್ ನಲುಗಿ ಹೋಗಿದ್ದಾರೆ.
ಟ್ಯಾಕ್ಸಿ ಚಾಲಕರಿಗೆ ಬಿಗ್ ಶಾಕ್: ಉಬರ್, ರ್ಯಾಪಿಡೋ ಕಾರ್ಯಾಚರಣೆ ಸ್ಥಗಿತಕ್ಕೆ ಹೈಕೋರ್ಟ್ ಆದೇಶ!
ತಂಡದ ಪರ ಸ್ಪೋಟಕ ಬ್ಯಾಟಿಂಗ್ ನಡೆಸಬೇಕಿದ್ದ ಆರಂಭಿಕರಾದ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮತ್ತು ದೇವದತ್ತ ಪಡಿಕ್ಕಲ್, ಶುರುವಿನಲ್ಲೇ ತಮ್ಮ ಬಹುಮುಖ್ಯ ವಿಕೆಟ್ಗಳನ್ನು ಶೀಘ್ರವೇ ಜಿಟಿ ಬೌಲರ್ಗಳಿಗೆ ಒಪ್ಪಿಸಿ, ಪೆವಿಲಿಯನ್ನತ್ತ ಮುಖ ಮಾಡಿದರು. ಇದು ತಂಡವನ್ನು ದೊಡ್ಡ ಸಂಕಷ್ಟಕ್ಕೆ ದೂಡಿತು. ಈ ಸಮಯದಲ್ಲಿ ಕ್ರೀಸ್ಗೆ ಬಂದ ಜಿತೇಶ್ ಶರ್ಮ, ಲಿಯಾಮ್ ಲಿವಿಂಗ್ ಸ್ಟೋನ್, ಟಿಮ್ ಡೇವಿಡ್ ಅವರ ಅಬ್ಬರದ ಬ್ಯಾಟಿಂಗ್ ತಂಡದ ಮೊತ್ತವನ್ನು 150ರ ಗಡಿದಾಟಿಸಲು ಸಹಾಯ ಮಾಡಿತು.
10 ಓವರ್ವರೆಗೂ ಮಂದಗತಿಯಲ್ಲೇ ಸಾಗಿದ ಆರ್ಸಿಬಿ, 14ನೇ ಓವರ್ ನಂತರ ಅಬ್ಬರದ ಬ್ಯಾಟಿಂಗ್ ನಡೆಸಿತು. ಇನ್ನೂ ಗುಜರಾತ್ ಟೈಟನ್ಸ್ ಪರ ಬೌಲಿಂಗ್ನಲ್ಲಿ ಮಿಂಚಿದ ಮೊಹಮ್ಮದ್ ಸಿರಾಜ್, ಸ್ಟಾರ್ ಬ್ಯಾಟರ್ಗಳಾದ ಫಿಲ್ ಸಾಲ್ಟ್, ದೇವದತ್ತ ಪಡಿಕ್ಕಲ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ರ ವಿಕೆಟ್ ಕಬಳಿಸುವ ಮೂಲಕ ಆರ್ಸಿಬಿ ಬ್ಯಾಟರ್ಗಳನ್ನು ಯಶಸ್ವಿಯಾಗಿ ಕಟ್ಟಿಹಾಕಿದರು. 20 ಓವರ್ ಅಂತ್ಯಕ್ಕೆ ಆರ್ಸಿಬಿ 169 ರನ್ಗಳನ್ನು ಕಲೆಹಾಕಿದೆ.
ಈ ಟಾರ್ಗೆಟ್ ರೀಚ್ ಮಾಡುತ್ತಾ ಗುಜರಾತ್ ಕಾದು ನೋಡಬೇಕಾಗಿದೆ.