Close Menu
Ain Live News
    Facebook X (Twitter) Instagram YouTube
    Friday, May 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    IPL 2025: ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್​ಗೇರಿದ ಆರ್​ಸಿಬಿ: ಪಂಜಾಬ್ ಬೆಂಗಳೂರು ಕೊಟ್ಟ ಪಂಚ್ ಹೀಗಿತ್ತು!

    By AIN AuthorMay 29, 2025
    Share
    Facebook Twitter LinkedIn Pinterest Email
    Demo

    ಚಂಡೀಗಢದ ಮುಲ್ಲನಪುರದಲ್ಲಿ ಇಂದು ನಡೆಯುತ್ತಿರುವ ಐಪಿಎಲ್ 2025 ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ ಸಿಬಿಯ ಬೌಲಿಂಗ್ ಚಮತ್ಕಾರಕ್ಕೆ ಪಂಜಾಬ್ ಕಿಂಗ್ಸ್ ಕೇವಲ 101 ರನ್ ಗಳಿಗೆ ಆಲೌಟ್ ಆಗಿದೆ.

    ಹೀನ ಕೃತ್ಯಗಳಲ್ಲಿ ಭಾಗಿಯಾದವರ ರಕ್ಷಣೆಗೆ ನಿಂತಿರುವ ರಾಜ್ಯ ಸರ್ಕಾರ: ಅರವಿಂದ್ ಬೆಲ್ಲದ್ ವಾಗ್ದಾಳಿ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್​ಗೇರುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್, ಆರ್​ಸಿಬಿ ಬೌಲರ್​ಗಳ ಮಾರಕ ದಾಳಿಯ ಮುಂದೆ ಕೇವಲ 101 ರನ್​ಗಳಿಗೆ ಆಲೌಟ್ ಆಯಿತು. ಈ ಗುರಿಯನ್ನು ಆರ್​ಸಿಬಿ ಸುಲಭವಾಗಿ ಬೆನ್ನಟ್ಟಿತು. ಇನ್ನು ಆರ್​ಸಿಬಿ ವಿರುದ್ಧ ಸೋತಿರುವ ಪಂಜಾಬ್, ನಾಳೆ ನಡೆಯಲ್ಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವನ್ನು, ಕ್ವಾಲಿಫೈಯರ್ 2 ರಲ್ಲಿ ಎದುರಿಸಲಿದೆ. ಆ ಪಂದ್ಯದಲ್ಲಿ ಗೆದ್ದ ತಂಡ ಬರುವ ಮಂಗಳವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆರ್​ಸಿಬಿ ತಂಡವನ್ನು ಎದುರಿಸಲಿದೆ.

    ಆರ್ ಸಿಬಿ ಬೌಲರ್ ಗಳಾದ ಸೂಯಶ್ ಶರ್ಮಾ ಮೂರು ವಿಕೆಟ್ ಕಬಳಿಸಿದರೆ, ಯಶ್ ದಯಾಳ್ ಹಾಗೂ ಜೋಶ್ ಹ್ಯಾಜಲ್ ವುಡ್ ತಲಾ ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಹಾಗೂ ಶೆಫರ್ಡ್ ತಲಾ ಒಂದೊಂದು ವಿಕೆಟ್ ಕಬಳಿಸುವ ಮೂಲಕ ಪಂಜಾಬ್ ಕಿಂಗ್ಸ್ ತಂಡವನ್ನು ಕೇವಲ 101 ರನ್ ಗಳಿಗೆ ಕಟ್ಟು ಹಾಕುವಲ್ಲಿ ಯಶಸ್ವಿಯಾದರು.

    ಪಂಜಾಬ್ ಕಿಂಗ್ಸ್ ಪರ ಆರಂಭಿಕ ಆಟಗಾರರಾದ ಪ್ರಿಯಾಂಶ್ ಆರ್ಯ ಕೇವಲ 7 ರನ್ ಗಳಿಗೆ ಯಶ್ ದಯಾಳ್ ಬೌಲಿಂಗ್ ನಲ್ಲಿ ಔಟ್ ಆದರೆ, ಪ್ರಭುಶಿಮ್ರಾನ್ ಸಿಂಗ್ 18 ರನ್ ಗಳಿಸಿ ಭುವನೇಶ್ವರ್ ಕುಮಾರ್ ಬೌಲಿಂಗ್ ನಲ್ಲಿ ಫೆವಿಲಿಯನ್ ಗೆ ಹೆಜ್ಜೆ ಹಾಕಿದರು. ತದನಂತರ ಜೋಶ್ ಇಂಗ್ಲೀಷ್ 4, ನಾಯಕ ಶ್ರೇಯಸ್ ಅಯ್ಯರ್ ಕೇವಲ 2 ರನ್ ಗಳಿಗೆ ಹ್ಯಾಜಲ್ ವುಡ್ ಬೌಲಿಂಗ್ ನಲ್ಲಿ ಔಟ್ ಆದರು.

    ಉಳಿದಂತೆ ನೆಹಲ್ ವಧೇರಾ 8, ಮಾರ್ಕಸ್ ಸ್ಟೋನಿಸ್ 26, ಶಶಾಂಕ್ ಸಿಂಗ್ 3, ಮುಶೀರ್ ಖಾನ್ ಶೂನ್ಯಕ್ಕೆ ಒಟಾದರು. ಅಜಾಮತ್ತುಲ್ಲಾ 18, ಹರ್ಪೀತ್ ಬ್ರಾರ್ ಕೇವಲ 4 ರನ್ ಗಳಿಗೆ ಫೆವಿಲಿಯನ್ ಗೆ ಹೆಜ್ಜೆ ಹಾಕಿದರು. ಇದರಿಂದಾಗಿ ಪಂಜಾಬ್ ಕಿಂಗ್ಸ್ 14. 1 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 101 ರನ್ ಗಳಿಸಲಷ್ಟೇ ಶಕ್ತವಾಯಿತು.

    Demo
    Share. Facebook Twitter LinkedIn Email WhatsApp

    Related Posts

    RCB ಈ ಬಾರಿ ಕಪ್ ಗೆದ್ರೆ ಈ ಕೆಲಸ ಮಾಡಿ: CM ಸಿದ್ದರಾಮಯ್ಯಗೆ ವಿಶೇಷ ಬೇಡಿಕೆ ಇಟ್ಟ ಬೆಂಗಳೂರು ಅಭಿಮಾನಿ!

    May 30, 2025

    IPL 2025: ಫೈನಲ್ ತಲುಪಿದ ಆರ್ ಸಿಬಿಗೆ ವಿಶ್ ಮಾಡಿದ ವಿಜಯ್ ಮಲ್ಯ!

    May 30, 2025

    ಪಂಜಾಬ್ ಮಣಿಸಿ ಫೈನಲ್ ತಲುಪಿದ RCB: ಕ್ಯಾಪ್ಟನ್ ರಜತ್ ಗೆಲುವಿನ ಕ್ರೆಡಿಟ್ ಯಾರಿಗೆ ಕೊಟ್ರೂ!

    May 30, 2025

    IPL 2025: ಫೈನಲ್​ಗೇರಿದ ಆರ್ ಸಿಬಿ: ಸ್ಟೇಡಿಯಂ ನಲ್ಲಿ ಕುಣಿದು ಕುಪ್ಪಳಿಸಿದ ಆಟಗಾರರು!

    May 30, 2025

    RCB ಬೌಲರ್ ಗಳ ಆರ್ಭಟ: ಫೈನಲ್‌ಗೇರಲು ಬೆಂಗಳೂರಿಗೆ ಜಸ್ಟ್ 102 ರನ್‌ ಗುರಿ!

    May 29, 2025

    IPL 2025: ಇಂದು ಪಂಜಾಬ್-ಬೆಂಗಳೂರು ಫೈನಲ್ ಫೈಟ್: RCBಗೆ ಹೆಚ್ಚಿದ ಗಾಯದ ಚಿಂತೆ!

    May 29, 2025

    Jitesh Sharma: ನನ್ನ ಸ್ಪೋಟಕ ಆಟಕ್ಕೆ ಆರ್‌ಸಿಬಿಯಲ್ಲಿರುವ ಅಣ್ಣ ಕಾರಣ: ಜಿತೇಶ್!

    May 28, 2025

    ಲಕ್ನೋ ವಿರುದ್ಧ 6 ವಿಕೆಟ್ ಗಳ ಜಯ: ಐಪಿಎಲ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಆರ್ ಸಿಬಿ!

    May 28, 2025

    IPL 2025: ಈ ಬಾರಿಯ ಐಪಿಎಲ್ ನಲ್ಲಿ ಫೈನಲ್ ತಂಡಗಳನ್ನು ಹೆಸರಿಸಿದ ರಾಬಿನ್ ಉತ್ತಪ್ಪ!

    May 27, 2025

    ಸಂಭಾವನೆ ಪಡೆಯದೇ ಅರಣ್ಯ ಇಲಾಖೆ ರಾಯಭಾರಿಯಾದ ಅನಿಲ್‌ ಕುಂಬ್ಳೆ

    May 27, 2025

    ಇಂದು RCB Vs LSG ಹೈ ವೋಲ್ಟೇಜ್ ಮ್ಯಾಚ್: ಮಳೆಯಿಂದ ಪಂದ್ಯ ರದ್ದಾದ್ರೆ ಯಾರಿಗೆ ಲಾಭ!?

    May 27, 2025

    IPL 2025: ಮುಂಬೈ ವಿರುದ್ಧ ಭರ್ಜರಿ ಗೆಲುವು: ಟೇಬಲ್ ಟಾಪರ್ ಆದ ಪಂಜಾಬ್‌ ಕಿಂಗ್ಸ್‌!

    May 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.