ಬೆಂಗಳೂರು:- ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಖಾಮುಖಿಯಾಗುತ್ತಿದೆ.
ಆಪಲ್ ಪ್ರಿಯರಿಗೆ ಗುಡ್ ನ್ಯೂಸ್: ಫ್ಲಿಪ್ಕಾರ್ಟ್ನಲ್ಲಿ ದಾಖಲೆಯ ಇಳಿಕೆ ಕಂಡ ಐಫೋನ್16!
18ನೇ ಆವೃತ್ತಿಯಲ್ಲಿ ಇಲ್ಲಿಯವರೆಗೆ ಸೋಲನ್ನೇ ಕಾಣದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎದುರಿಸಲಿದೆ. ತವರ ಅಂಗಳದಲ್ಲಿನ ಆರ್ಸಿಬಿಯ ರೋಚಕ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ.
ಅಂದ್ಹಾಗೆ ಇಂದು ನಡೆಯುವ ಕದನ ಕೇವಲ ಆರ್ಸಿಬಿ ಹಾಗೂ ಡೆಲ್ಲಿ ಕಾಳಗ ಮಾತ್ರವಲ್ಲ. ಆರ್ಸಿಬಿ ವರ್ಸಸ್ ಮಾಜಿ ಆರ್ಸಿಬಿಯನ್ಸ್ ನಡುವಿನ ಮಹಾ ಕಾಳಗ. ಕೆ.ಎಲ್.ರಾಹುಲ್, ಫಾಫ್ ಡುಪ್ಲೆಸಿ, ವೇಗಿ ಮಿಚೆಲ್ ಸ್ಟಾರ್ಕ್, ಕರುಣ್ ನಾಯರ್ ಇವರೆಲ್ಲರೂ ಆರ್ಸಿಬಿಯ ಮಾಜಿ ಪ್ಲೇಯರ್ಗಳೇ. ಡೆಲ್ಲಿ ತಂಡದ ಬಲವಾಗಿರೋ ಇವ್ರಿಗೆ ಚಿನ್ನಸ್ವಾಮಿ ಮೈದಾನದ ಪಿಚ್ ಹಾಗೂ ಇಲ್ಲಿನ ಪ್ಲೇಯಿಂಗ್ ಕಂಡಿಷನ್ಸ್ ಬಗ್ಗೆ ಚೆನ್ನಾಗಿ ಅರಿವಿದೆ. ಈ ತ್ರಿಮೂರ್ತಿಗಳ ಆಟಕ್ಕೆ ಕಡಿವಾಣ ಹಾಕಲು ಚಕ್ರವ್ಯೂಹ ರಚಿಸಬೇಕಿದೆ.