ಬೆಂಗಳೂರು:- ಇಂದು ಐಪಿಎಲ್ ಫೈನಲ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಫೈನಲ್ ಮ್ಯಾಚ್ ಗೂ ಮುನ್ನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.
ಪಟಾಕಿ ಸಿಡಿಸಿ ಆರ್.ಸಿ.ಬಿ ತಂಡಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ. ಮಹದೇವಪುರದ ಬಿಳೆಶೀವಾಲೆಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ದೊಡ್ಡ ಪರದೆ ಮೇಲೆ ಪಂದ್ಯ ವೀಕ್ಷಣೆ ಮಾಡಿದ್ದಾರೆ.
ಇನ್ನೂ ಆರ್ಸಿಬಿ ಅಭಿಮಾನಿಗಳ ಪಾಲಿಗೆ ಜೂ.3 ಪ್ರಮುಖವಾದ ದಿನ. ಎಲ್ಲರ ಚಿತ್ತ ಐಪಿಎಲ್ 2025ರ ಫೈನಲ್ ಪಂದ್ಯದ ಕಡೆಗೆ ನೆಟ್ಟಿದೆ. ಆರ್ಸಿಬಿ ಗೆಲುವಿಗಾಗಿ ಕೋಟ್ಯಂತರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಪಂಜಾಬ್ ವಿರುದ್ಧ ಫೈನಲ್ ಪಂದ್ಯ ನಡೆಯುತ್ತಿರುವ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ಫ್ಯಾನ್ಸ್ ಹವಾ ಜೋರಾಗಿದೆ.
ಗುಜರಾತ್ನ ಅಹಮದಾಬಾದ್ನ ಮೈದಾನದಲ್ಲಿರುವ ಆರ್ಸಿಬಿ ಅಭಿಮಾನಿಗಳು ವೀಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿ ಆರ್ಸಿಬಿ ಅಭಿಮಾನಿಗಳೇ ಹೆಚ್ಚಿದ್ದಾರೆ. ಪಂಜಾಬ್ ಫ್ಯಾನ್ಸ್ ತುಂಬಾ ಕಡಿಮೆ ಇದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ.