ಬೀದರ್ : ರಿಯಲ್ ಎಸ್ಟೆಟ್ ಉದ್ಯಮಿಯನ್ನು ಅಟ್ಟಾಡಿಸಿ ಹತ್ಯೆಗೈಯ್ಯಲಾಗಿದೆ. ಬೀದರ್ನ ಅಲಿಯಾಬಾದ್ ರಿಂಗ್ ರೋಡ್ನಲ್ಲಿರುವ ಎಸ್ಕೆ ಡಾಬಾ ಬಳಿ ಮರ್ಡರ್ ನಡೆದಿದ್ದು, ಮಚ್ಚಿನಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿ, ಗ್ರಾಪಂ ಸದಸ್ಯನ ಭೀಕರವಾಗಿ ಹತ್ಯೆ ಮಾಡಲಾಗಿದೆ.
ವೈಜಿನಾಥ ದತ್ತಾತ್ರೇಯ ಕೆಲಬಾ (49) ಕೊಲೆಯಾದ ವ್ಯಕ್ತಿ. ಮೃತ ವೈಜಿನಾಥ ಹೊನ್ನಿಕೇರಿ ಗ್ರಾಮದ ನಿವಾಸಿಯಾಗಿದ್ದು, ನಗರದ ಡಾಬಾದಲ್ಲಿ ಕುಳಿತುಕೊಂಡಿರುವ ವೇಳೆ ವೈಜಿನಾಥ್ ಮೇಲೆ ಏಕಾಏಕಿ ಅಟ್ಯಾಕ್ ನಡೆದಿದೆ. ಇಬ್ಬರು ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಜೀವ ಉಳಿಸಿಕೊಳ್ಳಲು ಓಡಿದ ವೈಜಿನಾಥ್ ರನ್ನು ಅಟ್ಟಾಡಿಸಿ ಕೊಚ್ಚಿ ಕೊಲೆಗೈದಿದ್ದಾರೆ.
ಪುಡಿರೌಡಿಗಳ ಅಟ್ಟಹಾಸ ; ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿದು ಪರಾರಿ
ಬೀದರ್ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಬೀದರ್ ಎಸ್ಪಿ ಪ್ರದೀಪ್ ಗುಂಟಿ ಸೇರಿದಂತೆ ಪೊಲೀಸರ ತಂಡ ಭೇಟಿ ನೀಡಿ , ಪರಿಶೀಲನೆ ನಡೆಸಿದೆ.