ಬೆಂಗಳೂರು: ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಯತ್ನಾಳ್ ಉಚ್ಛಾಟನೆ ಬಳಿಕ ಒಬ್ಬೊಬ್ಬ ರೆಬೆಲ್ಸ್ ನಾಯಕರು ದೂರವಾಗ್ತಿದ್ದಾರೆ. ಹೀಗಾಗಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ತೊಡೆತಟ್ಟಿದ ಯತ್ನಾಳ್ ಏಕಾಂಗಿಯಾಗ್ತಾರಾ ಅನ್ನೋ ಅನುಮಾನ ಮೂಡಿಸಿದೆ.
ಈ ನಡುವೆ ಸುದ್ದಿಗೋಷ್ಠಿ ನಡೆಸಿದ ಯತ್ನಾಳ್ ಟೀಂನ ಕುಮಾರ ಬಂಗಾರಪ್ಪ, ಯತ್ನಾಳ್ ಅವರು ಹೊಸ ಪಕ್ಷ ಕಟ್ತೀನಿ ಅಂತ ಹೇಳಿಲ್ಲ. ಮುಂದಿನ ನಿರ್ಧಾರ ವಿಜಯದಶಮಿ ನಂತರ ನಿರ್ಧಾರ ತೆಗೆದುಕೊಳ್ತೀನಿ ಅಂತ ಹೇಳಿದ್ದಾರೆ. ಆದ್ರೆ ನಾವ್ಯಾರು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕುಮಾರ ಬಂಗಾರಪ್ಪ ಹೇಳಿದ್ದಾರೆ.
ಮಗನ ಪರ ಪ್ರತಿಭಟನೆಗೆ ಬಂದಿದ್ದೇಕೆ ?
ಆದರೆ, ಯತ್ನಾಳ್ ಅವರನ್ನ ಬಿಜೆಪಿಗೆ ವಾಪಸ್ ಕರೆತರಲು ಮುಂದೆ ಬರುತ್ತೇವೆ. ಹೈಕಮಾಂಡ್ ಜೊತೆ ಚರ್ಚೆ ಮಾಡ್ತೀವಿ. ಯಡಿಯೂರಪ್ಪ ಅವರು ಪಕ್ಷ ಕಟ್ಟಿದವರು. ಅದರಲ್ಲಿ ಎರಡು ಮಾತಿಲ್ಲ. ಮಗನ ಪರವಾಗಿ ಪ್ರತಿಭಟನೆಗೆ ಬಂದು ಕುಳಿತರು. ಉಳಿದ ನಾಯಕರು ಯಾಕೆ ಬರಲಿಲ್ಲ, ಕರ್ನಾಟಕ ಏಕೀಕರಣ ಬಿಟ್ಟರೆ, ಇಂದು ಕಾಂಗ್ರೆಸ್ ವಿರುದ್ಧ ಒಟ್ಟಾಗುವ ಕಾಲ ಬಂದಿದೆ. ಅದನ್ನ ಬಿಟ್ಟು ಕೇವಲ ಹೋರಾಟ ಮಾಡುವ ಕೆಲಸ ಮಾಡಿದ್ದಾರೆ. ಆದಷ್ಟು ಬೇಗೆ ರಾಷ್ಟ್ರೀಯ ಅಧ್ಯಕ್ಷರು ನೇಮಕ ಆಗ್ತಾರೆ. ರಾಜ್ಯದ ಮೇಲೆ ಸೂಕ್ತ ನಿರ್ಧಾರ ಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಿನ್ನೆವರೆಗೂ ಮಾಡಿರೋ ಒಂದು ಕಡೆ ಹೋರಾಟ ಇರಲಿ. ಪಕ್ಷ ಸಂಘಟನೆ ಮಾಡುವ ಬಗ್ಗೆ ಮುಂದೆ ನಿರ್ಧಾರ ಮಾಡೋಣ. ಯತ್ನಾಳ್ ಅವರು ಇಂದು ನಮ್ಮ ಸಭೆಯಲ್ಲಿ ಇಲ್ಲ. ಆದ್ರೆ ಈ ಹೋರಾಟದ ಕೀರ್ತಿ ಯತ್ನಾಳ್ ಅವರಿಗೆ ಸಲ್ಲಬೇಕು. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತರ್ತೀವಿ.
ಅವರು ಮುಂದಿನ ನಿರ್ಧಾರ ತೆಗೆದುಕೊಳ್ತಾರೆ. ಯತ್ನಾಳ್ ಅವರ ವ್ಯಕ್ತಿತ್ವ ಹಾಗಿದೆ. ಅವರು ಮತ್ತೊಮ್ಮೆ ಪಕ್ಷಕ್ಕೆ ಬಂದ ಮೇಲೆ ಚರ್ಚೆ ಮಾಡ್ತೀವಿ ಎಂದ್ರು ಕುಮಾರ ಬಂಗಾರಪ್ಪ.