Close Menu
Ain Live News
    Facebook X (Twitter) Instagram YouTube
    Wednesday, June 25
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಭಾರತದಲ್ಲಿ ಆತಿಥ್ಯಕ್ಕೆ ಮರು ವ್ಯಾಖ್ಯಾನ: ಅಕ್ಕೊರ್-ಇಂಟರ್ ಗ್ಲೋಬ್ ಸಹಯೋಗಕ್ಕೆ ಸಹಿ

    By Author AINApril 10, 2025
    Share
    Facebook Twitter LinkedIn Pinterest Email
    Demo

    ಮುಂಬೈ: ಭಾರತದ ಆತಿಥ್ಯ ಕ್ಷೇತ್ರವನ್ನು ಪರಿವರ್ತಿಸುವ ನಿಟ್ಟಿನಲ್ಲಿ ಜಾಗತಿಕ ಆತಿಥ್ಯ ಕ್ಷೇತ್ರದ ಅಕ್ಕೊರ್ ಮತ್ತು ಭಾರತದ ಇಂಟರ್ ಗ್ಲೋಬ್  ಜತೆ ಮಹತ್ವದ ಸಹಯೋಗಕ್ಕೆ ಸಹಿ ಹಾಕಲಾಗಿದೆ

    ಇಂದು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆತಿಥ್ಯ ಉದ್ಯಮ ಸೃಷ್ಟಿಸಲು ಅವರ ಸಹಯೋಗವನ್ನು ಸದೃಢಗೊಳಿಸುವುದನ್ನು ಪ್ರಕಟಿಸಿದ್ದು ಇದರಿಂದ ಸರಿಸಾಟಿ ಇರದ ಜಾಲ, ಬ್ರಾಂಡ್ ಗಳ ಪೋರ್ಟ್ ಫೋಲಿಯೊ ಮತ್ತು ಎಲ್ಲ ಮಾರುಕಟ್ಟೆ ವಲಯಗಳಲ್ಲೂ ವಿತರಣೆಯನ್ನು ಒದಗಿಸುತ್ತದೆ. ಭಾರತದ ಏರುಗತಿಯಲ್ಲಿರುವ ಆತಿಥ್ಯ ಮಾರುಕಟ್ಟೆಯನ್ನು ಸ್ವಾಧೀನಪಡಿಸಿಕೊಳ್ಳುವ ಮಹತ್ವಾಕಾಂಕ್ಷೆ ಮತ್ತು ಉದ್ಯಮಗಳಲ್ಲಿ ಜಾಗತಿಕ ನಾಯಕರ ಶಕ್ತಿಗಳನ್ನು ಸಂಯೋಜಿಸಿರುವ ಈ ಪ್ಲಾಟ್ ಫಾರಂ 2030ರ ವೇಳೆಗೆ ಅಕ್ಕೊರ್ ಬ್ರಾಂಡ್ಸ್ ಅಡಿಯಲ್ಲಿ 300 ಹೋಟೆಲ್ ಗಳ ಜಾಲ ನಿರ್ಮಿಸುವ ಗುರಿ ಹೊಂದಿದೆ.

    ಈ ಮಹತ್ತರ ಸಹಯೋಗವು ಪ್ರತಿ ಪಾಲುದಾರರ ವಿಶಿಷ್ಟ ಶಕ್ತಿಗಳನ್ನು ಒಗ್ಗೂಡಿಸುತ್ತದೆ:

    • ಅಕ್ಕೊರ್, ಮುಂಚೂಣಿಯ ಜಾಗತಿಕ ಆತಿಥ್ಯ ಸಮೂಹವಾಗಿದ್ದು ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಪರಿಣಾಮಕಾರಿ ವ್ಯಾಪ್ತಿ ಹೊಂದಿದೆ ಮತ್ತು ಪ್ರಸ್ತುತ ದೇಶದಲ್ಲಿ 71 ಹೋಟೆಲ್ ಗಳನ್ನು ನಿರ್ವಹಿಸುತ್ತಿದ್ದು 40ಕ್ಕೂ ಹೆಚ್ಚು ಅಭಿವೃದ್ಧಿಪಡಿಸುತ್ತಿದ್ದು ಅದರಲ್ಲಿ ಇಕಾನಮಿಯಿಂದ ಐಷಾರಾಮಿ ಬ್ರಾಂಡ್ ಗಳವರೆಗೆ ವಿಸ್ತರಿಸಿವೆ. ಈ ಸಹಯೋಗದ ಮೂಲಕ ಅಕ್ಕೊರ್ ತನ್ನ ಹೆಜ್ಜೆ ಗುರುತನ್ನು ಗಮನಾರ್ಹವಾಗಿ ವಿಸ್ತರಿಸಲಿದೆ ಮತ್ತು ಕಾರ್ಯಾಚರಣೆಗಳನ್ನು ಸುಸೂತ್ರಗೊಳಿಸಲಿದ್ದು ಇಕಾನಮಿಯಿಂದ ಲೈಫ್ ಸ್ಟೈಲ್ ಮತ್ತು ಲಕ್ಷುರಿಯವರೆಗೆ ಎಲ್ಲ ವಲಯಗಳನ್ನೂ ಭಾರತೀಯ ಮಾರುಕಟ್ಟೆಯಲ್ಲಿ ಸದೃಢ ಪ್ರಗತಿಗೆ ತನ್ನ ಬದ್ಧತೆಯನ್ನು ಆಳವಾಗಿಸಲು ತನ್ನ ಬದ್ಧತೆಯನ್ನು ತೋರಿದೆ.

    ಇಂಟರ್ ಗ್ಲೋಬ್, ಮುಂಚೂಣಿಯ ಭಾರತೀಯ ಕಂಪನಿಯಾಗಿದ್ದು ಪ್ರಯಾಣ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಸರಿಸಾಟಿ ಇರದ ಪರಿಣಿತಿಯನ್ನು ತಂದಿದ್ದು ವೈಮಾನಿಕ (ಇಂಡಿಗೊ), ಹೋಟೆಲ್ಸ್ (ಭಾರತ ಮತ್ತು ಅಂತಾರಾಷ್ಟ್ರೀಯವಾಗಿ), ಏರ್ ಲೈನ್ ಮ್ಯಾನೇಜ್ಮೆಂಟ್ ಲಾಜಿಸ್ಟಿಕ್ಸ್, ಟ್ರಾವೆಲ್ ಮತ್ತು ಎಐ ಸನ್ನದ್ಧ ತಂತ್ರಜ್ಞಾನದಲ್ಲಿ ಅದರಲ್ಲಿ ಪೂರ್ವಸಿದ್ಧವಾದ ಉದ್ಯಮಶೀಲತೆಯ ಹಿನ್ನೆಲೆ ಹೊಂದಿದೆ. ಇಂಟರ್ ಗ್ಲೋಬ್ ಭಾರತದ ಅತ್ಯಂತ ದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೊದ ಅತ್ಯಂತ ದೊಡ್ಡ ಪಾಲುದಾರನಾಗಿದ್ದು 2025ರ ಹಣಕಾಸು ವರ್ಷದಲ್ಲಿ 400ಕ್ಕೂ ಹೆಚ್ಚು ವಿಮಾನಗಳು 130ಕ್ಕೂ ಹೆಚ್ಚು ತಾಣಗಳಿಗೆ ಸೇವೆ ಒದಗಿಸುತ್ತಿದ್ದು 2200ಕ್ಕೂ ಹೆಚ್ಚು ದೈನಂದಿನ ವಿಮಾನಗಳು ಸಂಚರಿಸುತ್ತಿವೆ. ಇದು ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಜಾಗತಿಕವಾಗಿ ಅತ್ಯಂತ ಮೌಲ್ಯಯುತ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ.

    ಟ್ರೀಬೊ ಜೊತೆಯಲ್ಲಿ ವಿಶೇಷ ಸಹಯೋಗ

    • ಟ್ರೀಬೊ, ಭಾರತದ ಮುಂಚೂಣಿಯ ಬ್ರಾಂಡೆಡ್ ಬಜೆಟ್ ಹೋಟೆಲ್ ಪ್ಲಾಟ್ ಫಾರಂಗಳಲ್ಲಿ ಒಂದಾಗಿದ್ದು 120 ನಗರಗಳಲ್ಲಿ 800 ಹೋಟೆಲ್ ಗಳನ್ನು ತನ್ನ ವಿಶಿಷ್ಟ ತಂತ್ರಜ್ಞಾನ-ಪ್ರೇರಿತ ವಿಧಾನ ಹಾಗೂ ದಕ್ಷ ವಿತರಣೆಯ ವ್ಯವಸ್ಥೆಗಳ ಮೂಲಕ ನಿರ್ವಹಿಸುತ್ತದೆ. ಅಕ್ಕೊರ್ ಮತ್ತು ಇಂಟರ್ ಗ್ಲೋಬ್ ಜಂಟಿಯಾಗಿ ಹೂಡಿಕೆ ಮಾಡುತ್ತವೆ ಮತ್ತು ಟ್ರೀಬೊದಲ್ಲಿ ಅತ್ಯಂತ ದೊಡ್ಡ ಪಾಲುದಾರರಾಗುತ್ತವೆ. ಟ್ರೀಬೊ ಭಾರತದಲ್ಲಿ ಮಾಸ್ಟರ್ ಲೈಸನ್ಸ್ ಒಪ್ಪಂದದ ಮೂಲಕ ಐಬಿಸ್ ಮತ್ತು ಮರ್ಕ್ಯೂರ್ ಬ್ರಾಂಡ್ ಗಳಲ್ಲಿ ಅಭಿವೃದ್ಧಿಪಡಿಸಲಿದೆ.
    • ಈ ಸಹಯೋಗದ ಅಡಿಯಲ್ಲಿ ಟ್ರೀಬೊ ಹಲವಾರು ಆಸ್ತಿ ಮಾಲೀಕರೊಂದಿಗೆ ಹತ್ತು ಹೊಸ ಮರ್ಕ್ಯೂರ್ ಗಳಿಗೆ ಒಪ್ಪಂದ ರೂಪಿಸಿಕೊಂಡಿದ್ದು ಭಾರತದಲ್ಲಿ ಬ್ರಾಂಡ್ ವಿಸ್ತರಣೆಯಲ್ಲಿ ಇದು ಮಹತ್ತರ ಮೈಲಿಗಲ್ಲಾಗಿದೆ.
    • ಅಕ್ಕೊರ್ ನ ಬ್ರಾಂಡ್ ಗಳು ಭಾರತದ ವಿಸ್ತಾರ ಅನ್ ಬ್ರಾಂಡೆಡ್ ಮಾರುಕಟ್ಟೆಯನ್ನು ತಲುಪಲು ಮತ್ತು ಪ್ರಗತಿಗೆ ವೇಗ ತುಂಬಲು ಟ್ರೀಬೊದ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತದೆ. ಈ ಸಂಯೋಜಿತ ಅಕ್ಕೊರ್ ಮತ್ತು ಟ್ರೀಬೊ ಪೋರ್ಟ್ ಫೋಲಿಯೊ ಭಾರತದ ಮೂರನೇ ಅತ್ಯಂತ ದೊಡ್ಡ ಆತಿಥ್ಯ ಸಂಸ್ಥೆಯನ್ನು ಸೃಷ್ಟಿಸಲಿದ್ದು 30,000ಕ್ಕೂ ಹೆಚ್ಚು ಕೋಣೆಗಳನ್ನು ಹೊಂದಿರುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    Israel Iran Ceasefire: ಎಲ್ಲಾ ಸಮಸ್ಯೆಗಳು ಶೀಘ್ರದಲ್ಲೇ ಕಣ್ಮರೆಯಾಗುತ್ತವೆ ಎಂದು ಟ್ರಂಪ್ ಹೇಳಿದ್ಯಾಕೆ..?

    June 25, 2025

    Shubhanshu Shukla: ಬಾಹ್ಯಾಕಾಶ ನೌಕೆಗೆ ಹೋಗುವ ಮುನ್ನ ತನ್ನ ನೆಚ್ಚಿನ ಹಾಡನ್ನು ಕೇಳಿದ ಸುಭಾಂಶು ಶುಕ್ಲಾ..!

    June 25, 2025

    Axiom 4: ಬಾಹ್ಯಾಕಾಶದತ್ತ ಭಾರತೀಯ ಶುಭಾಂಶು ಶುಕ್ಲಾ ಐತಿಹಾಸಿಕ ಪಯಣ ಶುರು! ರಾಕೆಟ್ ಉಡಾವಣೆ ಸಕ್ಸಸ್

    June 25, 2025

    Gold Rate: ಗುಡ್ ನ್ಯೂಸ್: ಚಿನ್ನದ ಬೆಲೆ ಇಳಿಕೆ – ಬೆಂಗಳೂರಲ್ಲಿ ಇಂದಿನ 10 ಗ್ರಾಂ ಬೆಲೆ ಎಷ್ಟಾಗಿದೆ ನೋಡಿ

    June 25, 2025

    Shubhanshu Shukla: ಶುಭಾಂಶು ಶುಕ್ಲಾ ಗಗನಯಾತ್ರೆಗೆ ಕ್ಷಣಗಣನೆ..! 40 ವರ್ಷದ ಬಳಿಕ ISSನತ್ತ ಭಾರತ

    June 25, 2025

    ಅಬ್ಬಬ್ಬಾ.. ಜನರು ಹೆಚ್ಚು ಖರ್ಚು ಮಾಡೋದು ಇದಕ್ಕೇನಾ..? ವರದಿಯಲ್ಲಿ ಶಾಕಿಂಗ್ ವಿಷಯ ಬಯಲು

    June 25, 2025

    Post Office Scheme: ಸಣ್ಣ ಉಳಿತಾಯ.. ದೊಡ್ಡ ಲಾಭ: ನಿಮ್ಮನ್ನು ಕೋಟ್ಯಾಧಿಪತಿಯನ್ನಾಗಿ ಮಾಡುತ್ತೆ ಈ ಪೋಸ್ಟ್ ಆಫೀಸ್ ಸ್ಕೀಮ್..!

    June 25, 2025

    Gautam Adani: ಭಾರತಕ್ಕೆ ಶಾಂತಿಯ ಮೌಲ್ಯ ತಿಳಿದಿದೆ: ಆಪರೇಷನ್ ಸಿಂಧೂರ್ ಬಗ್ಗೆ ಗೌತಮ್ ಅದಾನಿ ಹೇಳಿದ್ದೇನು..?

    June 24, 2025

    No Petrol: ಹೊಸ ತಂತ್ರಜ್ಞಾನ: ಜುಲೈ 1 ರಿಂದ ಈ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬ್ಯಾನ್..!

    June 24, 2025

    Iran-America: ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್: ಕದನ ವಿರಾಮ ಉಲ್ಲಂಘಿಸಬೇಡಿ ಎಂದ ಟ್ರಂಪ್

    June 24, 2025

    ದಾಳಿ-ಪ್ರತಿದಾಳಿ: ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ.. ಟ್ರಂಪ್ ವಿರುದ್ಧ ಇರಾನ್ ಪ್ರತೀಕಾರ!

    June 24, 2025

    ಜಮ್ಮುವಿನಲ್ಲಿ ಲ್ಯಾಂಡ್ ಆಗದೆ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್..! ಯಾಕೆ ಗೊತ್ತಾ..?

    June 23, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.