ಹುಬ್ಬಳ್ಳಿ: ಧರ್ಮಾಧಾರಿತ ಭಯೋತ್ಪಾದನೆಯನ್ನು ನಾವು ಖಂಡಿಸುತ್ತೇವೆ. ಜಗತ್ತಿನಲ್ಲಿ ಸಾವಿರಾರು ಧರ್ಮಗಳಿದ್ದು ಎಲ್ಲಾ ಧರ್ಮಗಳು ಕೂಡ ಪರಸ್ಪರ ಒಂದು ಧರ್ಮ ಮತ್ತೊಂದು ಧರ್ವಮವನ್ನು ಗೌರವಿಸಬೇಕು. ಆಚರಿಸಬೇಕು ಅಂತೇನಿಲ್ಲ. ಒಂದು ಧರ್ಮ ಮತ್ತೊಂದು ಧರ್ಮದ ಮೇಲೆ ದಾಳಿ ಮಾಡುವದು ಅತ್ಯಂತ ಅಮಾನುಷವಾದದ್ದು ಎಂದು ಮೂರುಸಾವಿರ ಮಠದ ಗುರುಸಿದ್ದರಾಜಯೋಗೇಂದ್ರ ಶ್ರೀಗಳು ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ದಾಳಿ ಮಾಡುವದು ಉಗ್ರವಾದವಾಗುತ್ತದೆ. ಉಗ್ರವಾದ ಇರುವಲ್ಲಿ ಅಲ್ಲಿ ಧರ್ಮಕ್ಕೆ ಅವಕಾಶವಿರುವದಿಲ್ಲ. ಆದ್ರೆ ದ್ವೇಷದಿಂದ ಕೆಲಸ ಮಾಡುವುದನ್ನು ಇಡೀ ಜಗತ್ತು ಖಂಡಿಸುತ್ತದೆ ಎಂದರು.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
ಈಗಗಾಲೇ ಸಾಕಷ್ಟು ಸಹನೆ ಭಾರತ ತೋರಿದೆ. ಈಗ ಮತ್ತೆ ಧರ್ಮದ ಮೇಲೆ ದಾಳಿಮಾಡಿದ್ದು, ಯುದ್ದವನ್ನು ನಾವು ಬಯಸುವುದಿಲ್ಲ. ಯುದ್ದ ಆಗಲಿಕ್ಕೆ ಪ್ರಚೋದನೆ ಕೊಡುವ ಇಂತ ಸಂದರ್ಭಗಳು ಬರಬಾರದು ಎಂದರು. ಜಾತಿಗಣತಿ ಸರಿಯಾಗಿಲ್ಲ ಎಂಬ ಭಾವನೆ ಇದೆ. ಬಹು ಸಂಖ್ಯಾತರ ಅಸಧಾನ ಇದೆ. ಕರಾರುವಕ್ಕಾಗಿ ಜಾತಿಗಣತಿ ನಡೆಯಬೇಕು. ಇಲ್ಲದಿದ್ರೆ ಒಳ್ಳೆಯದಲ್ಲ ಎಂದರು.