ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ವಿದೇಶಕ್ಕೆ ತೆರಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಡೆವಿಲ್ ಸಿನಿಮಾದ ಚಿತ್ರೀಕರಣಕ್ಕಾಗಿ ದಾಸ ದುಬೈ ಮತ್ತು ಯೂರೋಪ್ ಗೆ ತೆರಳಬೇಕಿದೆ. ಹೀಗಾಗಿ
ಜೂನ್ 1 ರಿಂದ 25 ರವರೆಗೆ 25 ದಿನಗಳ ಕಾಲ ವಿದೇಶಕ್ಕೆ ತೆರಳಲು ಅನುಮತಿ ಕೋರಿ ಸಿಆರ್‌ಪಿಸಿ ಸೆಕ್ಷನ್ 439(1) (b) ಅಡಿ 57 ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಡೆವಿಲ್ ಸಿನಿಮಾ ಚಿತ್ರೀಕರಣಕ್ಕಾಗಿ ಅನುಮತಿ ನೀಡುವಂತೆ ಸಿಆರ್ಪಿಸಿ ಸೆಕ್ಷನ್ 439(1) (b) ಅಡಿ ಅರ್ಜಿ ಸಲ್ಲಿಸಿರುವ ದರ್ಶನ್ ಮನವಿ ಮಾಡಿದ್ದಾರೆ. ದಾಸನಿಗೆ ಜಾಮೀನು ಕೊಡುವಾಗ ಹೈಕೋರ್ಟ್ ಬೆಂಗಳೂರು ಬಿಡುವಂತಿಲ್ಲ ಎಂಬ ಷರತ್ತು ವಿಧಿಸಿತ್ತು. ಬಳಿಕ ಬೆಂಗಳೂರು ಬಿಡುವಂತಿಲ್ಲ ಎಂಬ ಷರತ್ತು ಸಡಿಲಿಸಿ ದೇಶಾದ್ಯಂತ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಸಿನಿಮಾ ಚಿತ್ರೀಕರಣ ಕಾರಣ ನೀಡಿ ಷರತ್ತು ಸಡಿಸಿಲಿಕೊಂಡಿದ್ದ ದರ್ಶನ್ ರಾಜಸ್ತಾನದಲ್ಲಿ ಡೆವಿಲ್ ಶೂಟಿಂಗ್ ಮುಗಿಸಿಕೊಂಡು ಬಂದಿದ್ದರು. ಇದೀಗ ಅದೇ ಚಿತ್ರೀಕರಣ ಕಾರಣ ನೀಡಿ ವಿದೇಶಕ್ಕೆ ತೆರಳಲು ಅನುಮತಿ ಗಾಗಿ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ ನಲ್ಲಿ ದರ್ಶನ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯಲಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನ ಎ2 ಆರೋಪಿ ದರ್ಶನ್ ಪರವಾಗಿ ವಕೀಲ ಸುನಿಲ್ ಕುಮಾರ್ ರಿಂದ ಅರ್ಜಿ ಸಲ್ಲಿಕೆ ಮಾಡಿದ್ದು, 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ನಡೆಯಲಿರುವ ಅರ್ಜಿ ವಿಚಾರಣೆ ನಡೆಯಲಿದೆ. ವಿದೇಶಗಳಲ್ಲಿ ಶೂಟಿಂಗ್ ಮಾಡುವ ಅಗತ್ಯವಿದೆ ಎಂದು ನಿರ್ಮಾಪಕರಿಂದ ಮನವಿ ಮಾಡಿದೆ. ಜೈಮಾತಾ ಪ್ರೊಡಕ್ಷನ್ಸ್ ಮನವಿ ಆಧರಿಸಿ ಕೋರ್ಟ್ ಗೆ ನಟ ದರ್ಶನ್ಅರ್ಜಿ ಸಲ್ಲಿಸಿದ್ದಾರೆ.
ಎಸ್ಪಿಪಿಯಿಂದ ಆಕ್ಷೇಪ
ದರ್ಶನ್ ಗೆ ವಿದೇಶಕ್ಕೆ ತೆರಳಲು ಅವಕಾಶ ನೀಡದಂತೆ ಎಸ್ಪಿಪಿಯಿಂದ ಆಕ್ಷೇಪ ವ್ಯಕ್ತವಾಗಿದೆ. ತನಿಖಾಧಿಕಾರಿ ಮಾಹಿತಿ ಆಧರಿಸಿ ವಿದೇಶ ಪ್ರಯಾಣಕ್ಕೆ ಅವಕಾಶ ನೀಡದಂತೆ ಆಕ್ಷೇಪಣೆ ಸಲ್ಲಿಕೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಜಾಮೀನು ರದ್ದು ಕೋರಿರುವ ಅರ್ಜಿ ಬಾಕಿ ಇದೆ. ವಿದೇಶಕ್ಕೆ ತೆರಳಿದರೆ ವಾಪಸ್ ವಾಪಸ್ ಬಾರದೇ ಇರಬಹುದು. ಸಾಕ್ಷಿಗಳ ಮೇಲೆ ಪ್ರಭಾವ ಸಾಧ್ಯತೆ ಇದ್ದು ಅವಕಾಶ ನೀಡಬಾರದು ಎಂದಿ ಎಸ್ಪಿಪಿ ವಾದ ಮಾಡಲಿದ್ದಾರೆ.