ಬೆಂಗಳೂರು:- ನಿವೃತ್ತ ಡಿಜಿ,ಐಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಆರೋಪಿತೆ ಪಲ್ಲವಿಯನ್ನು ಕಸ್ಟಡಿಗೆ ಪಡೆದು ಮಾಹಿತಿ ಕಲೆಹಾಕುತ್ತಿದ್ದಾರೆ.
ಅನುಮಾನಾಸ್ಪದ ರೀತಿ ಯುವ ವಕೀಲೆ ಶವ ಪತ್ತೆ! ಕೊಲೆ ಶಂಕೆ!? ಪ್ರಮುಖ ಸಾಕ್ಷಿಯಾಗಿದ್ದವನೂ ನೇಣಿಗೆ ಶರಣು!
ಕೋರ್ಟ್ ಅನುಮತಿ ಪಡೆದು ಆರೋಪಿತೆ ಪಲ್ಲವಿಯನ್ನು ಏಳು ದಿನ ಕಸ್ಟಡಿಗೆ ಪಡೆದಿರುವ ಸಿಸಿಬಿ, A2 ಆರೋಪಿಯಾಗಿರುವ ಕೃತಿ ವಿಚಾರಣೆಗೂ ಸಿದ್ದತೆ ಕೈಗೊಂಡಿದೆ. ಕೃತಿ ಮಾನಸಿಕ ಸ್ಥಿತಿ ಸ್ಥಿರವಾಗಿದೆ ಎಂದು ನಿಮಾನ್ಸ್ ನಿಂದ ರಿಪೋರ್ಟ್ ಬಂದಿದೆ. ಕೃತಿ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬಹುದು ಎಂದು ವೈದ್ಯರು ವರದಿ ಕೊಟ್ಟಿದ್ದಾರೆ. ಕಳೆದ 20 ನೇ ತಾರೀಖು ಎಚ್ಎಸ್ಆರ್ ಲೇಔಟ್ನ ಮನೆಯಲ್ಲಿ ಪತ್ನಿಯೇ ಓಂ ಪ್ರಕಾಶ್ ರನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಅನುಮತಿ ಪಡೆದು ಸಿಸಿಬಿ ಪೊಲೀಸರು, ಆರೋಪಿತೆ ಪಲ್ಲವಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಮೂರು ದಿನ ಆಸ್ಪತ್ರೆಯಲ್ಲಿದ್ದ ಕೃತಿ ಡಿಶ್ಚಾರ್ಜ್ ಆಗಿದ್ದು, ಮನೆಗೆ ರಿಟರ್ನ್ ಆಗಿದ್ದಾರೆ. ಕೆಲವೇ ದಿನದಲ್ಲಿ ನೋಟೀಸ್ ಕೊಟ್ಟು ವಿಚಾರಣೆ ಮಾಡಲು ಸಿಸಿಬಿ ಸಿದ್ದತೆ ಕೈಗೊಂಡಿದೆ. ಸದ್ಯಕ್ಕೆ ಕೃತಿ ಪಾತ್ರದ ಬಗ್ಗೆ ಯಾವುದೇ ಸಾಕ್ಚ್ಯ ಸಿಕ್ಕಿಲ್ಲ.
ತನಿಖೆ ಮುಂದುವರೆದ ಭಾಗದಲ್ಲಿ ಸಾಕ್ಷ್ಯ ಸಿಕ್ಕಲ್ಲಿ ಸಿಸಿಬಿ ವಶಕ್ಕೆ ಪಡೆಯಲಿದೆ. ಎಸಿಪಿ ಧರ್ಮೆಂದ್ರ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.