ಬೆಂಗಳೂರು:- ನಿವೃತ್ತ ಡಿಜಿಪಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತೆ ಪತ್ನಿ ಪಲ್ಲವಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪಲ್ಲವಿ ಅವರನ್ನು ಸೋಮವಾರ ನ್ಯಾಯಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು. ಜರ್ಡ್ಜ್ ಜಿ.ಎ.ಲತಾದೇವಿ ಅವರು ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಮೇ 3ರ ವರೆಗೆ ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇನ್ನೂ ಮಾಜಿ ಡಿಜಿಪಿ ಅವರನ್ನು ಚಾಕುವಿನಿಂದ ಇರಿದು ಬಹಳ ಹಿಂಸೆಯಿಂದ ಕೊಲೆ ಮಾಡಲಾಗಿತ್ತು. ಈ ಬಗ್ಗೆ ಓಂ ಪ್ರಕಾಶ್, ಹಾಗೂ ಸಹೋದರಿ ದೂರು ಕೊಟ್ಟಿದ್ದರು. ದೂರಿನ ಅನ್ವಯ ಮಗಳು ಮತ್ತು ಪತ್ನಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.