ಬೆಂಗಳೂರು:- ನಿವೃತ್ತ ಡಿಜಿಪಿ ಓಂ ಪ್ರಕಾಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿ ವಿ ಐ ಪಿ ಸೆಕ್ಯುರಿಟಿ ಇನ್ಸ್ಪೆಕ್ಟರ್ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.
IPL 2025: ಕೊಹ್ಲಿ, ಪಡಿಕ್ಕಲ್ ಅರ್ಧ ಶತಕದ ಆಟ: ಪಂಜಾಬ್ ವಿರುದ್ಧ ಆರ್ ಸಿಬಿಗೆ 7 ವಿಕೆಟ್ ಗಳ ಭರ್ಜರಿ ಜಯ!
ಭಾನುವಾರ ಮಧ್ಯಾಹ್ನ 3:05 ನಿಮಿಷಕ್ಕೆ ಕಾಲ್ ಮಾಡಿದ್ರು. ತುಂಬಾ ಚೆನ್ನಾಗಿ ಮಾತನಾಡಿದ್ರ. ಮನೆಗೆ ಬರ್ತೀನಿ ಸಾರ್ ಅಂದೆ. ಆದ್ರೆ ಬೇಡ ಬರಬೇಡ ಮನೆಯಲ್ಲಿ ಮೇಡಮ್ ಇರ್ತಾರೆ ಅಂದ್ರು. ತುಂಬಾ ಕ್ರೂರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಹಿಂದಿನ ಉದ್ದೇಶ ಏನು ಅನ್ನೋದು ಗೊತ್ತಾಗಿಲ್ಲ. ರೂಢಿಗತವಾಗಿ ಕೊಲೆ ಮಾಡಿದ್ದಾರೆ. ಕುತ್ತಿಗೆ ಭಾಗಕ್ಕೆ ಇರಿದಿದ್ದಾರೆ. ಎರಡು ಬಾರಿ ಇರಿದಿದ್ದಾರೆ. ತಲೆಗೂ ಕೂಡ ಚಾಕು ಹಾಕಿದ್ದಾರೆ. ಉಸಿರು ಇರುವಾಗಲೇ ಕ್ರೂರವಾಗಿ ಕೊಲೆ ಮಾಡಿದ್ದಾರೆ
ಒಳ್ಳೆಯ ಅಧಿಕಾರಿ ಅವರು. ಇವರೇನ ಕೊಲೆ ಆಗಿರೋದು ಅಂತ ಅನಿಸ್ತಾ ಇದೆ. ಮೇಡಮ್ ಅವರು ಮನೆಯ ಬಳಿ ಬರೋಕೆ ಬಿಡ್ತಾ ಇರಲಿಲ್ಲ. ಫ್ಯಾಮಿಲಿ ವಿಚಾರದ ಬಗ್ಗೆ ಗೊತ್ತಿಲ್ಲ. ಮಾನಸಿಕವಾಗಿ ನೊಂದಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ರೀಟ್ ಮೆಂಟ್ ಮಾಡಿಸ್ತಾ ಇದೀನಿ ಅಂದ್ರು. ಸಾಹೇಬ್ರು ಯಾರನ್ನಾದ್ರೂ ಭೇಟಿ ಆದ್ರೆ ಅವರಿಗೆ ಆಗ್ತಾ ಇರಲಿಲ್ಲ. ಹೆಂಡತಿಯ ಕಾಟಕ್ಕೆ ಬೇಸತ್ತು ಹೋಗಿದ್ದರು ಎಂದು ಇನ್ಸ್ಪೆಕ್ಟರ್ ಶ್ರೀನಿವಾಸ್ ಹೇಳಿಕೆ ಕೊಟ್ಟಿದ್ದಾರೆ..