ಬೆಂಗಳೂರು: ನಿವೃತ್ತ ಐಪಿಎಸ್ ಓಂ ಪ್ರಕಾಶ್ ಪ್ರಕರಣದ ತನಿಖೆಯಲ್ಲಿ ಭಾರೀ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಓಂ ಪ್ರಕಾಶ್ ಪತ್ನಿ ಪಲ್ಲವಿಯನ್ನ ಹೆಚ್‌ಎಸ್‌ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲೇ ಓಂ ಪ್ರಕಾಶ್ ನಿನ್ನೆ ಹತ್ಯೆಯಾಗಿದ್ದು, ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.
ಎಚ್ಚರ ಜನರೇ: ಜ್ವರ, ತಲೆನೋವು ಅಂತ DOLO 650 ಮಾತ್ರೆ ನುಂಗುತ್ತಾ ಇದ್ದೀರಾ!? ಇದು ಎಷ್ಟು ಡೇಂಜರ್ ಗೊತ್ತಾ?
ಪುತ್ರ ಕಾರ್ತೀಕೇಶ್ ನೀಡಿದ ದೂರಿನ ಮೇರೆಗೆ ತಾಯಿ ಪಲ್ಲವಿ (Pallavi), ಸಹೋದರಿ ಕೃತಿ (Kruthi) ವಿರುದ್ಧ ಹೆಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 103(ಕೊಲೆ) 3(ಒಂದೇ ಉದ್ದೇಶಕ್ಕಾಗಿ ಒಟ್ಟಾಗಿ ಎಸಗಿದ ಅಪರಾಧ) ಅಡಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಪತ್ನಿ ಪಲ್ಲವಿ ಮತ್ತು ಕೃತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೂರಿನಲ್ಲಿ ಏನಿದೆ?
ಕಳೆದ ಒಂದು ವಾರದಿಂದ ತಾಯಿ ಪಲ್ಲವಿ ಕೊಲೆ ಬೆದರಿಕೆ ಹಾಕುತ್ತಿದ್ದರು. ಕೊಲೆ ಬೆದರಿಕೆ ಹಾಕುತ್ತಿದ್ದರಿಂದ ಅವರ ಸಹೋದರಿ ಸರಿತಾ ಮನೆಗೆ ತಂದೆ ಹೋಗಿದ್ದರು. ಎರಡು ದಿನಗಳ ಹಿಂದೆ ಕೃತಿ ಸರಿತಾ ಅವರ ಮನೆಗ ಹೋಗಿ ಪೀಡಿಸಿ ಕರೆ ತಂದಿದ್ದಳು. ಏ.20ರ ಸಂಜೆ 5 ಗಂಟೆಯ ವೇಳೆ ನಾನು ದೊಮ್ಮಲೂರಿನಲ್ಲಿರುವ ಗಾಲ್ಫ್ ಅಸೋಸಿಯೇಷನ್‌ನಲ್ಲಿ ಇದ್ದಾಗ ನಮ್ಮ ಮನೆಯೆ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ತಂದೆಯ ದೇಹ ಕೆಳಗಡೆ ಬಿದ್ದಿರುತ್ತದೆ ಎಂದು ತಿಳಿಸಿದರು.