ಬೆಂಗಳೂರು: ಗೃಹ ಸಚಿವರ ನಿವಾಸದ ಪಕ್ಕದಲ್ಲೇ ನಿವೃತ್ತ ಪೊಲೀಸ್ ಅಧಿಕಾರಿ ಗನ್ ಹಿಡಿದು ರಂಪಾಟ ನಡೆಸಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಜಯಪ್ರಕಾಶ್, ನಿವೃತ್ತ ಪೊಲೀಸ್ ಅಧಿಕಾರಿಯಾಗಿದ್ದು, ಪರಮೇಶ್ವರ್ ಅವರ ನಿವಾಸದ ಬಳಿ ನಿಟೇಶ್ ಅಪಾರ್ಟ್ಮೆಂಟ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು,
ಈ ಕಾಮಗಾರಿಗೆ ಗ್ರಾನೈಟ್‌ಗಳನ್ನು ಹೊತ್ತು ತಂದ ಕಂಟೈನರ್ ಲಾರಿ ನಿಧಾನವಾಗಿ ಸಾಗುತ್ತಿತ್ತು. ಇದರಿಂದ ರೋಚ್ಚಿಗೆದ್ದ ನಿವೃತ್ತ ಪೊಲೀಸ್ ಅಧಿಕಾರಿ ಜಯಪ್ರಕಾಶ್, ಲಾರಿ ಚಾಲಕನಿಗೆ ಗನ್ ತೋರಿಸಿ ಫುಲ್ ಅವಾಜ್ ಹಾಕಿದ್ದಾರೆ. ಲ್ಲಿ ಏಕೆ ಬಂದೆ ಮಗನೇ.. ಇಪ್ಪತ್ತು ವರ್ಷದಿಂದ ಕಟ್ಟುತ್ತಲೇ ಇದ್ದಾರೆ ಅಪಾರ್ಟ್‌ಮೆಂಟ್‌ನನ್ನ.. ನಡೆಯೋ ಇಲ್ಲಿಂದ ಎಂದು ಅವಾಜ್ ಹಾಕಿದ್ದಾರೆ.
ಸರ್ ವರ್ಕ್ ನಡೆಯುತ್ತಿದೆ, ಗ್ರಾನೈಟ್ ಅನ್‌ಲೋಡ್ ಮಾಡಬೇಕು ಸರ್ ಎಂದು ಕಾರ್ಮಿಕರು ಹೇಳಿದ್ದಾರೆ. ಈ ವೇಳೆ ಕಟ್ಟಡ ಕಾರ್ಮಿಕರಿಗೂ ಗನ್ ತೋರಿಸಿ ಬೆದರಿಕೆ ಹಾಕಿದ್ದು, ಬಿಡಿಸಲು ಬಂದ ತಮ್ಮ ಕುಟುಂಬಸ್ಥರ ವಿರುದ್ದವೂ ಗರಂ ಆಗಿದ್ದಾರೆ. ಜಯಪ್ರಕಾಶ್ ರಂಪಾಟ ಕಂಡು ದಾರಿಹೋಕರು ತಬ್ಬಿಬ್ಬಾಗಿದ್ದಾರೆ.