ಬೆಂಗಳೂರು:- ಮೂರು ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಲಾರಿ ಚಾಲಕನೋರ್ವ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಬ್ಬಾಳ ಫ್ಲೈ ಓವರ್ ಮೇಲೆ ನಿನ್ನೆ ಮಧ್ಯರಾತ್ರಿ ಎರಡು ಗಂಟೆಗೆ ಜರುಗಿದೆ. ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಘಟನೆ ಜರುಗಿದೆ. ಫಯಾಜ್ ಅಹಮ್ಮದ್ ಸಾವನ್ನಪ್ಪಿರುವ ಚಾಲಕ.
ಇಂದು ಸಿಇಟಿ ಫಲಿತಾಂಶ ಪ್ರಕಟ: ರಿಸಲ್ಟ್ ಚೆಕ್ ಮಾಡೋದು ಹೇಗೆ!? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!
ಕೊಡಿಗೇಹಳ್ಳಿ ಫ್ಲೈ ಓವರ್ ಮೇಲೆ ಈ ಡೆಡ್ಲಿ ಆ್ಯಕ್ಸಿಡೆಂಟ್ ನಡೆದಿದೆ. 10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಪರಿಣಾಮ ರಸ್ತೆ ಮೇಲೆಯೇ ಕಲ್ಲು ತುಂಬಿದ್ದ ಟ್ರಕ್ ಪಲ್ಟಿ ಹೊಡೆದಿದೆ.
10 ವ್ಹೀಲರ್ ಓಪನ್ ಬಾಡಿ ವಾಹನ, ಕಸದ ಲಾರಿ ಮತ್ತು ಎರ್ಟಿಗಾ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದ್ದು, ಓರ್ವ ಸಾವನಪ್ಪಿದ್ದಾನೆ. ಕಸದ ಲಾರಿ ಚಾಲಕ ಫಯಾಜ್ ಅಹಮ್ಮದ್ ಸಾವನಪ್ಪಿದ್ದಾನೆ. ಕಸದ ಲಾರಿಗೆ ಕಲ್ಲಿನ ಬ್ಲಾಕ್ ತುಂಬಿಕೊಂಡಿದ್ದ 10 ವ್ಹೀಲರ್ ವಾಹನ ಹಿಂಬದಿಯಿಂದ ಡೆಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಕಲ್ಲು ತುಂಬಿದ್ದ ಟ್ರಕ್ ರಸ್ತೆಯಲ್ಲೇ ಪಲ್ಟಿ ಹೊಡೆದಿದೆ. ಈ ವೇಳೆ ಕಸದ ಲಾರಿ ಮತ್ತು ಟ್ರಕ್ ಮಧ್ಯೆ ಸಿಲುಕಿ ಚಾಲಕ ಸಾವನಪ್ಪಿದ್ದಾನೆ.
ಟ್ರಕ್ನಲ್ಲಿ ಭಾರಿ ಗಾತ್ರದ ಕಲ್ಲುಗಳು ಇದ್ದರಿಂದ ನಿಯಂತ್ರಣ ತಪ್ಪಿ, ಡಿಕ್ಕಿ ರಭಸಕ್ಕೆ ಲಾರಿ ಚಾಲಕ ಸಾವನ್ನಪ್ಪಿದ್ದಾನೆ. ಚಾಲಕನ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಹೆಬ್ಬಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.