ಐಪಿಎಲ್ ಇತಿಹಾಸದಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಎರಡೆರಡು ದಾಖಲೆ ಬರೆದಿದ್ದಾರೆ. ಐಪಿಎಲ್ 2025 ರ ಎಲಿಮಿನೇಟರ್ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಆರಂಭದಲ್ಲೇ ಸಿಕ್ಕಿದ ಎರಡು ಜೀವದಾನಗಳನ್ನು ಸದುಪಯೋಗಪಡಿಸಿಕೊಂಡು ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ. ಅಲ್ಲದೆ ಇದೇ ಪಂದ್ಯದಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಕರುನಾಡಿಗೆ ಕೊರೊನಾ ಆತಂಕ: ಸೋಂಕಿನ ಕೇಸ್ ಮತ್ತಷ್ಟು ಹೆಚ್ಚಳ.. ಹೆಮ್ಮಾರಿಗೆ 3ನೇ ಬಲಿ!
ರೋಹಿತ್ ಶರ್ಮಾ 7000 ರನ್ ಗಳಿಸಿದ್ದು, ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜೊತೆಗೆ 300 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಆಗಿ ಹಿಟ್ ಮ್ಯಾನ್ ಹೊರಹೊಮ್ಮಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಬ್ಯಾಟರ್‌ಗಳು
ವಿರಾಟ್ ಕೊಹ್ಲಿ – 266 ಪಂದ್ಯಗಳಲ್ಲಿ 8618 ರನ್
ರೋಹಿತ್ ಶರ್ಮಾ – 271 ಪಂದ್ಯಗಳಲ್ಲಿ 7000 ರನ್
ಶಿಖರ್ ಧವನ್ – 222 ಪಂದ್ಯಗಳಲ್ಲಿ 6769 ರನ್
ಡೇವಿಡ್ ವಾರ್ನರ್ – 184 ಪಂದ್ಯಗಳಲ್ಲಿ 6565 ರನ್
ಸುರೇಶ್ ರೈನಾ – 205 ಪಂದ್ಯಗಳಲ್ಲಿ 5528 ರನ್