ಹುಬ್ಬಳ್ಳಿ: ಮಂಗಳೂರಿನಲ್ಲಿ ನಡೆದ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ರಚನೆ ಮಾಡಿದ ಮಾದರಿಯಲ್ಲೇ ಮೈಸೂರಿನಲ್ಲೂ ವಿಶೇಷ ಪೋಲಿಸ್ ತಂಡ ರಚನೆ ಮಾಡುವಂತೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಗೃಹಸಚಿವರನ್ನು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ರೀತಿಯಲ್ಲೇ ಮೈಸೂರಿನಲ್ಲಿ ಯೂ ಸಹ ಈ ಹಿಂದೆ ಅನೇಕ ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವಂತಹ ಘಟನೆಗಳು ನಡೆದಿತ್ತು ಅಲ್ಲದೆ ಹತ್ಯೆ ಗಳೂ ನಡೆದಿತ್ತು ಎಂದು ತೇಜಸ್ವಿ ಸ್ಮರಿಸಿದ್ದಾರೆ.
ಮೈಸೂರು ಕೂಡ ಸೂಕ್ಷ್ಮಾತಿ ಸೂಕ್ಷ್ಮ ಪ್ರದೇಶ ವಾಗಿದ್ದು ಕ್ಯಾತಮಾರನಹಳ್ಳಿಯಲ್ಲಿ ರಾಜು ಹತ್ಯೆ ಪ್ರಕರಣ ಮತ್ತು ಮೊನ್ನೆ ನಡೆದಂತಹ ಉದಯಗಿರಿ ಪೋಲಿಸ್ ಠಾಣೆಯ ಮೇಲೆ ಕಲ್ಲು ತೂರಾಟ ಮತ್ತು ಮಸಿದಿ ಘಟನೆಗಳು ನಡೆದಿದ್ದವು.
ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ!
ಇದನ್ನು ಮೀರಿ ಮೈಸೂರು ನಗರ ಮತ್ತು ಜಿಲ್ಲೆಯಲ್ಲಿ ಮಿತಿಮೀರಿದ ರೌಡಿ ಶೀಟರ್ ಗಳ ಗ್ಯಾಂಗ್ ವಾರ್ ಮತ್ತು ರೌಡಿ ಶೀಟರ್ ಗಳಿಂದ ಬರುತ್ತಿರುವ ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ಕಳೆದ ಕೆಲವು ವರ್ಷಗಳಲ್ಲಿ ಹತ್ಯೆ ಮಾಡಿರುವ ಘಟನೆಗಳು ಇನ್ನೂ ಮಾಸಿಲ್ಲ.
ಇಂತಹ ಘಟನೆಗಳು ಇಂದಿಗೂ ಕೂಡ ನಿರಂತರ ವಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ನಿನ್ನೆ ಮಧ್ಯರಾತ್ರಿ ಕೂಡ ಕ್ಯಾತಮಾರನಹಳ್ಳಿಯಲ್ಲಿ ರೌಡಿ ಶೀಟರ್ ಕಾರ್ತಿಕ್ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟುಮಾಡಿದೆ ಎಂದು ತಿಳಿಸಿದ್ದಾರೆ.ಅವಕಾಶ ವಿದ್ದರೆ ರೌಡಿ ಶೀಟರ್ ಗಳನ್ನು ಗುರುತಿಸಿ ಗಡಿಪಾರು ಮಾಡುವಂತೆ ತೇಜಸ್ವಿ ಮನವಿ ಮಾಡಿದ್ದಾರೆ.
ಈ ಮೇಲಿನ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ರೌಡಿ ಶೀಟರ್ ಮತ್ತು ಅವರ ಸಹಚರರ ಚಲನವಲನ ಗಳನ್ನು ಗಮನಿಸಿ ರೌಡಿ ಚಟುವಟಿಕೆಗಳನ್ನು ಮೈಸೂರು ಮಹಾನಗರದಲ್ಲಿ ಸಂಪೂರ್ಣ ಮಟ್ಟ ಹಾಕಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಮಂಗಳೂರು ಮತ್ತು ಉಡುಪಿ ಮಾದರಿಯಲ್ಲಿ ವಿಶೇಷ ಪೋಲಿಸ್ ತಂಡ ರಚನೆ ಮಾಡಬೇಕು ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಗೃಹ ಸಚಿವರು ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.