ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕಂಡ ಕಂಡಲ್ಲಿ ಜನರನ್ನು ಅಡ್ಡ ಹಾಕುವ ಕಿರಾತಕರು ಹಲ್ಲೆ ಮಾಡಿ ಉದ್ಧಟತನ ತೋರುತ್ತಿದ್ದಾರೆ. ಇದೇ ರೀತಿ ಕೈಯಲ್ಲಿ ಡ್ರಾಗರ್ ಹಿಡಿದು ಬೆದರಿಸಿ ನಂತರ ಕಾರ್ ಬಳಿ ನಿಂತಿದ್ದ ಯುಕವರ ಮೇಲೆ ಅಟ್ಯಾಕ್ ಮಾಡಿದ ರೌಡಿಶೀಟರ್ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಮಾದನಾಯಕನಹಳ್ಳಿ ರೌಡಿಶೀಟರ್ ಮಂಜುನಾಥ್ ಎಂಬಾತನಿಂದ ಹಲ್ಲೆಯಾಗಿದ್ದು, ರೌಡಿವಶೀಟರ್ ಮಂಜುನಾಥ್ ಹಾಗೂ ಶ್ರೇಯಸ್ ಎಂಬಾತನಿಂದ ಹಲ್ಲೆಯಾಗಿದೆ. ಕಡಬಗೆರೆ ಕ್ರಾಸ್ ನ ಶ್ರೀರಂಗ ಬಾರ್ ಬಳಿ ನಿಂತಿದ್ದ ಯುವಕರ ಮೇಲೆ ಆಕ್ಟಿವಾ ಸ್ಕೂಟರ್ ನಲ್ಲಿ ಬಂದಿ ರೌಡಿಶೀಟರ್ ಮಂಜುನಾಥ್ @ ಮಂಜ ಹಾಗೂ ಶ್ರೇಯಸ್ ಹಿಡಿದು ಮನ ಬಂದಂತೆ ಥಳಿಸಿದ್ದಾರೆ.
ಕಾರ್ ಬಳಿ ನಿಂತಿದ್ದ ನಾಲ್ಕೈದು ಜನರಿಗೂ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾನೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.