2025ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು, ಅಕ್ಷರಶಃ ಕಳಪೆ ಪ್ರದರ್ಶನ ತೋರುತ್ತಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯವನ್ನು ಗೆದ್ದ ನಂತರ, ಸಿಎಸ್ಕೆ ಇದುವರೆಗೆ ಮತ್ತೆ ಗೆಲುವಿನ ರುಚಿ ನೋಡಿಲ್ಲ. ಕಳೆದ ಶುಕ್ರವಾರ ಚೆನ್ನೈ ತಂಡ ಕೋಲ್ಕತ್ತಾ ಕೈಟ್ ರೈಡರ್ಸ್ ವಿರುದ್ಧ ಸೋಲು ಅನುಭವಿಸಿತ್ತು. ಇದು ಈ ಋತುವಿನಲ್ಲಿ ಚೆನ್ನೈ ತಂಡದ ಸತತ ಐದನೇ ಸೋಲು. ಸಿಎಸ್ಕೆ ಎರಡು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.
ಏತನ್ಮಧ್ಯೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ಮತ್ತು ಖಾಯಂ ನಾಯಕ ರುತುರಾಜ್ ಗಾಯಕ್ವಾಡ್ ಅವರು ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎಂಎಸ್ ಧೋನಿ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ರುತುರಾಜ್ ಗಾಯಕ್ವಾಡ್ ಅವರು ಇನ್ಸ್ಟಾಗ್ರಾಮ್ನಲ್ಲಿ ಎಂಎಸ್ ಧೋನಿಯನ್ನು ಅನ್ಫಾಲೋ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ. ಆದಾಗ್ಯೂ, ಗಾಯಕ್ವಾಡ್ ಇನ್ಸ್ಟಾಗ್ರಾಮ್ ಧೋನಿಯನ್ನು ಎಂದಿಗೂ ಫಾಲೋ ಮಾಡಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ಗಾಯಕ್ವಾಡ್ ಮಾಹಿಯನ್ನು ಅನ್ಫಾಲೋ ಮಾಡುರುವುದಕ್ಕೆ ಕೂಡ ಯಾವುದೇ ಪುರಾವೆಗಳಿಲ್ಲ. ಇತ್ತೀಚೆಗೆ ಸಿಎಸ್ಕೆ ನಾಯಕ ರುತುರಾಜ್ ಗಾಯಕ್ವಾಡ್ ಗಾಯದ ಕಾರಣದಿಂದಾಗಿ ಇಡೀ ಐಪಿಎಲ್ ಋತುವಿನಿಂದ ಹೊರಗುಳಿದ ಕಾರಣ ಈ ಚರ್ಚೆ ಹುಟ್ಟುಕೊಂಡಿದೆ.