ಬಾಲಿವುಡ್ ನಟ ಸೈಫ್ ಅಲಿ ಖಾನ್ ವೃತ್ತಿ ಜೀವನದ ಅತ್ಯಂತ ಕೆಟ್ಟ ಸಿನಿಮಾ ಆದಿಪುರುಷ ಎನಿಸುತ್ತದೆ. ಈ ಚಿತ್ರ ಟ್ರೋಲ್ ಆದಷ್ಟು ಯಾವ್ ಸಿನಿಮಾನೂ ಆಗಿಲ್ಲ ಅನಿಸುತ್ತದೆ. ಕಳಪೆಮಟ್ಟದ ಗ್ರಾಫಿಕ್ಸ್ ನೋಡಿ ಎಲ್ಲರು ದಂಗಾಗಿದ್ದರು. ಆದಿಪುರುಷ ಚಿತ್ರದಲ್ಲಿ ಪ್ರಭಾಸ್ ರಾಮನಾಗಿ, ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಹೀನಾಯ ಸೋಲು ಕಂಡು ಟ್ರೋಲ್ ಆದ ಆದಿಪುರುಷ ಸಿನಿಮಾವನ್ನು ಸೈಫ್ ಮಗ ನೋಡಿದ್ದು, ಆತನಿಗೂ ಚಿತ್ರ ಇಷ್ಟವಾಗಿಲ್ಲ.
ಜ್ಯೂವೆಲ್ ಥೀಫ್ ಸಿನಿಮಾ ಪ್ರಚಾರದ ವೇಳೆ ಸೈಫ್ ಅಲಿ ಖಾನ್ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಜಯದೀಪ್ ನೆಟ್ ಫ್ಲಿಕ್ಸ್‌ಗಾಗಿ ನಡೆಸಿಕೊಟ್ಟ ಸಂದರ್ಶನದಲ್ಲಿ ಸೈಫ್ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ, ಜಯದೀಪ್, ‘ನೀವು ನಟಿಸಿದ ಯಾವುದಾದರೂ ಸಿನಿಮಾವನ್ನು ನಿಮ್ಮ ಮಕ್ಕಳು ನೋಡಿದ್ದಾರಾ’ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸೈಫ್, ‘ಇತ್ತೀಚೆಗೆ ನಾನು ಅವನಿಗೆ ಆದಿಪುರುಷ್ ಸಿನಿಮಾ ತೋರಿಸಿದೆ. ಆತ ನನಗೆ ಲುಕ್ ಕೊಡಲು ಶುರು ಮಾಡಿದ. ನಾನು ಅವನಲ್ಲಿ ಕ್ಷಮೆ ಕೇಳಿದೆ. ಅವನು ಓಕೆ ಅಂತ ಹೇಳಿದ. ಆತ ನನ್ನನ್ನು ಕ್ಷಮಿಸಿದ’ ಎಂದಿದ್ದಾರೆ.
ಓಂ ರಾವತ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಆದಿಪುರುಷ ಸಿನಿಮಾದಲ್ಲಿ ಸೈಫ್ ಲಂಕೇಶ್ವರ ರಾವಣನಾಗಿ ನಟಿಸಿದ್ದರು. ಕೃತಿ ಸನೂನ್ ಸೀತೆಯಾಗಿ, ಪ್ರಭಾಸ್ ರಾಮನಾಗಿ ಅಭಿನಯಿಸಿದ್ದರು. ಗ್ರಾಫಿಕ್ಸ್‌ಗಾಗಿ ಚಿತ್ರತಂಡ ಸಾಕಷ್ಟು ಖರ್ಚು ಮಾಡಿತ್ತು. ಆದರೆ ಅದೇ ಗ್ರಾಫಿಕ್ ಟ್ರೋಲ್‌ಗೆ ಕಾರಣವಾಗಿದ್ದು ವಿಪರ್ಯಾಸ.