ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಚಿನ್ನದ ಮಳಿಗೆಗಳಲ್ಲಿ ಒಂದಾದ ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಇದೀಗ ಬೆಂಗಳೂರಿನಲ್ಲಿ ತನ್ನ ಏಳನೇ ಶಾಖೆಯನ್ನು ಆರಂಭಿಸಿದೆ. ಗುರುವಾರದಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಹೊಸ ಮಳಿಗೆಯ ಉದ್ಘಾಟನೆ ಅದ್ದೂರಿಯಿಂದ ನೆರವೇರಿದೆ.
ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ, ಅಭಿನಯ ಚಕ್ರವರ್ತಿ, ಕನ್ನಡದ ಮಾಣಿಕ್ಯ ಸುದೀಪ್ ಅವರು ನೂತನ ಮಲ್ಲೇಶ್ವರಂನಲ್ಲಿನ ನೂತನ ಮಳಿಗೆಯನ್ನು ಉದ್ಘಾಟಿಸಿ, ಶುಭಕೋರಿದರು. ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ , ಮಾಜಿ ಉಪಮುಖ್ಯಮಂತ್ರಿ, ಶಾಸಕ ಸಿ.ಎನ್. ಅಶ್ವಥ್ ನಾರಾಯಣ್ , ನಟ ಅಶ್ವಿನಿ ಪುನೀತ್ ರಾಜ್ಕುಮಾರ್ , ಎಡಿಜಿಪಿ ವಿ.ರಾಜ್ ಕುಮಾರ್, ಆರ್. ಪಿ ರವಿಶಂಕರ್ , ಸತ್ಯನಾರಾಯಣ, ಹಿರಿಯ ನಟಿ ಪ್ರೇಮ, ಗಾಯಕ ಚಂದನ್ ಶೆಟ್ಟಿ , ಬಿಗ್ ಬಾಸ್ ಖ್ಯಾತಿಯ ನಟಿ ಅನುಷಾ ರೈ, ನಟಿ ಐಶ್ವರ್ಯ ಸಿಂಧೋಗಿ, ನಟ ಶಿಶಿರ್ ಶಾಸ್ತ್ರಿ ಸೇರಿದಂತೆ ಗಣ್ಯರು ಈ ಕಾರ್ಯಕರ್ಮದಲ್ಲಿ ಪಾಲ್ಗೊಂಡಿದ್ದರು.
ಇದೇ ವೇಳೆ ಮಾತನಾಡಿದ ಶ್ರೀಸಾಯಿಗೋಲ್ಡ್ ಪ್ಯಾಲೇಸ್ ಮಾಲೀಕರಾದ ಟಿ.ಎ.ಶರವಣರವರು ಮಾತನಾಡಿ, ಚಿನ್ನ ಮನೆಯಲ್ಲಿ ಇದ್ದರೆ ಚೆನ್ನಾ, ಚಿನ್ನದ ದರ ಎಂದು ಕಡಿಮೆಯಾಗುವುದಿಲ್ಲ ದಿನದಿಂದ, ದಿನಕ್ಕೆ ಹೆಚ್ಚಳಲಾಗುತ್ತಿದೆ. ಚಿನ್ನ ಖರೀದಿ ಮಾಡಿ, ಮನೆಯಲ್ಲಿ ಇಟ್ಟರೆ ಸಂಕಷ್ಟದ ಕಾಲದಲ್ಲಿ ಕೈಹಿಡಿಯುವ ಅಮೂಲ್ಯ ವಸ್ತು. ಮದುವೆ, ಶುಭ ಸಮಾರಂಭಗಳಿಗೆ ಮತ್ತು ಹಬ್ಬ ದಿನಗಳಲ್ಲಿ ಚಿನ್ನಭಾರಣ ಧರಿಸಲು ವಿಶಿಷ್ಟ, ವಿನ್ಯಾಸದ ಅಭರಣ, ಡೈಮೆಂಡ್ ಗಳು ಲಭ್ಯವಿದೆ. ಮಹಿಳೆಯರು ಸೌಂದರ್ಯಕ್ಕೆ ಮೆರಗು ನೀಡುವುದು ಚಿನ್ನಭಾರಣಗಳು ನಮ್ಮ ಹೊಸ ಸ್ಟೋರ್ ಉದ್ಘಾಟನೆಯ ಪ್ರಯುಕ್ತ ದುಬೈ ಬೆಲೆಯಲ್ಲಿ ಚಿನ್ನ ಸೇರಿ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಾಗುತ್ತಿದೆ ಎಂದರು.