ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಗೆ ಗೆಲುವು ಅನ್ನೋದು ಮರಿಚಿಕೆಯಾಗಿದೆ. ಸಾಲು ಸಾಲು ಸೋಲುಗಳನ್ನು ಕಾಣುತ್ತಿರುವ ಸಲ್ಲುಮೀಯಾ ಬ್ಯಾಕ್ ಟು ಟ್ರ್ಯಾಕ್ ಗೆ ಕರೆದುಕೊಂಡು ಜವಾಬ್ದಾರಿಯನ್ನು ದಕ್ಷಿಣದ ಖ್ಯಾತ ನಿರ್ದೇಶಕ ಎ ಆರ್ ಮುರುಗದಾಸ್ ಹೊತ್ತುಕೊಂಡಿದ್ದರು. ಅದೇ ಭರವಸೆಯಲ್ಲಿ ಸಿಕಂದರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ದಕ್ಷಿಣದ ನಟಿ ರಶ್ಮಿಕಾ ಮಂದಣ್ಣರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದರು. ಆದ್ರೆ ಈ ಸೌತ್ ಫಾರ್ಮೂಲ ವರ್ಕೌಟ್ ಆಗಿಲ್ಲ. ಟ್ರೆಂಡ್ ಗೆ ತಕ್ಕಂತೆ ಮುರುಗದಾಸ್ ಸಿಕಂದರ್ ಕಥೆಯಲ್ಲಿ ಅಪ್ ಡೇಟ್ ಇಲ್ಲದೇ ಇರುವುದು ಸಿಕಂದರ್ ಸೋಲಿಗೆ ಕಾರಣ ಅನ್ನೊ ಅಭಿಪ್ರಾಯ ಸಿನಿಮಾವಲಯದಲ್ಲಿ ವ್ಯಕ್ತವಾಗುತ್ತಿದೆ.
ಸಿಕಂದರ್ ಸೋತು ಸುಣ್ಣವಾಗುತ್ತಿದ್ದಂತೆ ಗೆಲುವಿಗಾಗಿ ಮತ್ತೊಮ್ಮೆ ಸಲ್ಮಾನ್ ಖಾನ್ ದಕ್ಷಿಣ ಚಿತ್ರರಂಗದ ನಿರ್ದೇಶಕನ ಹಿಂದೆ ಬಿದ್ರೆ ಅನ್ನೋ ಟಾಕ್ ಬಾಲಿವುಡ್ ನಿಂದ ಸೌತ್ ಸಿನಿರಂಗದವರೆಗೂ ಹಬ್ಬಿದೆ. ತೆಲುಗಿನ ಖ್ಯಾತ ನಿರ್ದೇಶಕ ಹರೀಶ್ ಶಂಕರ್ ಜೊತೆ ಭಾಜಿಯಾನ್ ಸಿನಿಮಾ ಮಾಡ್ತಿದ್ದಾರೆ ಎಂಬ ಗುಲ್ಲೆದಿದೆ. ಇತ್ತೀಚೆಗೆ ಹರೀಶ್ ಶಂಕರ್ ನಿರ್ದೇಶನದ ಮಿಸ್ಟರ್ ಬಚ್ಚನ್ ಚಿತ್ರ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಇತ್ತ ಪವನ್ ಕಲ್ಯಾಣ್ ನಟನೆಯ, ಹರಿ ನಿರ್ದೇಶನ ಉಸ್ತಾದ್ ಭಗತ್ ಸಿಂಗ್ ಚಿತ್ರ ನಿಂತಿದೆ. ಹೀಗಾಗಿ ಬಾಲಿವುಡ್ ನತ್ತ ಹೆಜ್ಜೆ ಇಡಲು ಹರರೀಶ್ ಶಂಕರ್ ಸಜ್ಜಾಗಿದ್ದಾರಂತೆ.
ದಕ್ಷಿಣ ಚಿತ್ರರಂಗದ ಮೈತ್ರಿ ಮೂವೀ ಮೇಕರ್ಸ್ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಸಿನಿಮಾ ಮಾಡುವ ಉತ್ಸಾಹದಲ್ಲಿದೆಯಂತೆ. ಈ ಸಂಸ್ಥೆಯ ಈ ಚಿತ್ರಕ್ಕೆ ಹರೀಶ್ ಶಂಕರ್ ಸಾರಥಿ ಎನ್ನಲಾಗ್ತಿದೆ. ಈಗಾಗಲೇ ಇಡೀ ತಂಡ ಸಲ್ಲುಗೆ ಕಥೆಹೇಳಿದ್ದು, ಭಾಯಿಜಾನ್ ಕೂಡ ಕಥೆ ಕೇಳಿ ಒಕೆ ಎಂದಿದ್ದಾರೆ ಎನ್ನಲಾಗುತ್ತಿದೆ. ಸುಲ್ತಾನ್, ಭಜರಂಗಿ ಭಾಯಿಜಾನ್ ನಂತಹ ಹಿಟ್ ಕೊಟ್ಟಿರುವ ಸಲ್ಮಾನ್ ಖಾನ್ ಇದೇ ರೀತಿಯ ಮತ್ತೊಂದು ಸಕ್ಸಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಕ್ಸಸ್ ಜವಾಬ್ದಾರಿಯನ್ನು ಹರೀಶ್ ಶಂಕರ್ ಹೊತ್ತುಕೊಳ್ಳಬೇಕು. ಹಾಗೇ ನೋಡಿದ್ರೆ ಹರಿ ಇತ್ತೀಚೆಗೆ ನಿರ್ದೇಶಿಸಿದ ಚಿತ್ರಗಳು ಸೋತಿವೆ. ಹೀಗಾಗಿ ಭಾಯಿಜಾನ್ ಫ್ಯಾನ್ಸ್ ಈ ಕಾಂಬಿನೇಷನ್ ಬೇಡ್ವೇ ಬೇಡ ಎನ್ನುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಶಾರುಖ್ ಖಾನ್ ಗೆ ಜವಾನ್ ಚಿತ್ರ ಮಾಡಿದ್ದ ಅಟ್ಲಿ ಸಲ್ಮಾನ್ ಖಾನ್ ಗೂ ಆಕ್ಷನ್ ಕಟ್ ಹೇಳಬೇಕಿತ್ತು. ಅದು ಆಗಿಲ್ಲ. ಹೀಗಾಗಿ ಸಲ್ಮಾನ್ ದಕ್ಷಿಣದ ಬೇರೆ ನಿರ್ದೇಶಕರ ಹಿಂದೆ ಗೆಲುವಿಗಾಗಿ ಓಡುತ್ತಿದ್ದಾರೆ ಅನ್ನೋದು ವಿಪರ್ಯಾಸವೇ ಸರಿ. ಇನ್ನೂ ಹರೀಶ್ ಶಂಕರ್, ಗಬ್ಬರ್ ಸಿಂಗ್, ದುವ್ವಾಡ ಜಗನ್ನಾಧಮ್ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.