ಬಹುಭಾಷಾ ನಟಿ ಸಮಂತಾ ಮುಟ್ಟಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳು ಪೀರಿಯಡ್ಸ್ ಬಗ್ಗೆ ಓಪನ್ ಆಗಿ ಮಾತಾಡಲು ಮುಜುಗರಪಟ್ಟುಕೊಳ್ಳುವೇಕೆ ಎಂದು ನೋವನ್ನು ಹೊರಹಾಕಿದ್ದಾರೆ.
ಸಮಂತಾ ನಟನೆ ಜೊತೆಯಲ್ಲೀಗ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ವೆಬ್ ಸೀರೀಸ್ ಗಳಲ್ಲಿ ಬ್ಯುಸಿಯಾಗಿರುವ ನಟಿ, ಇತ್ತೀಚೆಗೆ ಮಹಿಳೆಯರ ಋತುಚಕ್ರದ ಬಗ್ಗೆ ಮುಕ್ತವಾಗಿ ಅಭಿಪ್ರಾಯಪಡಿಸಿದ್ದಾರೆ. ಪೋಡ್ ಕಾಸ್ಟ್ ವೊಂದರಲ್ಲಿ ಸ್ಯಾಮ್, ‘ಹೆಣ್ಣಾಗಿ ನಾವು ಇಲ್ಲಿಯವರೆಗೆ ಬಂದಿದ್ದೇವೆ. ಆದರೂ ಮುಟ್ಟಿನ ವಿಷಯಗಳ ಬಗ್ಗೆ ಮಾತನಾಡುವಾಗ ಇಂದಿಗೂ ಮೌನ ವಹಿಸುತ್ತೇವೆ. ಅದನ್ನು ಅವಮಾನ ಎಂದು ಭಾವಿಸುತ್ತೇವೆ. ನಮ್ಮ ಋತುಚಕ್ರ ಶಕ್ತಿಯುತವಾಗಿವೆ. ಇದು ಜೀವನವನ್ನು ದೃಢಪಡಿಸುತ್ತವೆ. ಇದು ಖಂಡಿತವಾಗಿಯೂ ಮುಜುಗರ ಅಥವಾ ಹಗುರವಾಗಿ ಪರಿಗಣಿಸುವ ವಿಷಯವಲ್ಲ. ಋತುಚಕ್ರ ನಮ್ಮ ಮನಸ್ಸು ಮತ್ತು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನಾವು ಪ್ರತಿ ವರ್ಷವೂ ನಿರಂತರವಾಗಿ ಕಲಿಯುತ್ತಲೇ ಇರಬೇಕು’ ಎಂದು ಹೇಳಿದ್ದಾರೆ.
ವೈವಾಹಿಕ ಜೀವನದಿಂದ ನೊಂದಿರುವ ಸಮಂತಾ ಎರಡನೇ ಮದುವೆಗೆ ಸಜ್ಜಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಗಾಸಿಪ್ ಗಳಿಗೆ ಕಿವಿಗೆ ಹಾಕಿಕೊಳ್ಳದ ಸಮಂತಾ ಆಗಾಗಾ ವಿದೇಶಿ ಪ್ರವಾಸ ಕೈಗೊಳ್ಳುತ್ತಾರೆ. ಸ್ಯಾಮ್ ಬೇಬಿ ನಿರ್ಮಾಣದ ಶುಭಂ ಚಿತ್ರ ಬಿಡುಗಡೆ ಸಿದ್ಧವಾಗಿದೆ.